ADVERTISEMENT

ಎಲ್ಗರ್‌ ತಲೆಗೆ ಅಪ್ಪಳಿಸಿದ ಬೌನ್ಸರ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 15:57 IST
Last Updated 21 ಅಕ್ಟೋಬರ್ 2019, 15:57 IST
ಬೌನ್ಸರ್‌ ಪೆಟ್ಟು ತಿಂದು ಕ್ರೀಸ್‌ನಲ್ಲಿ ಕುಸಿದು ಬಿದ್ದ ಡೀನ್‌ ಎಲ್ಗರ್‌ ಅವರಿಗೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದರು –ಪಿಟಿಐ ಚಿತ್ರ
ಬೌನ್ಸರ್‌ ಪೆಟ್ಟು ತಿಂದು ಕ್ರೀಸ್‌ನಲ್ಲಿ ಕುಸಿದು ಬಿದ್ದ ಡೀನ್‌ ಎಲ್ಗರ್‌ ಅವರಿಗೆ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದರು –ಪಿಟಿಐ ಚಿತ್ರ   

ರಾಂಚಿ: ಸೋಮವಾರದ ಆಟದ ವೇಳೆ ಭಾರತದ ಉಮೇಶ್‌ ಯಾದವ್‌ ಅವರ ಬೌನ್ಸರ್‌, ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್‌ ಡೀನ್‌ ಎಲ್ಗರ್‌ ಅವರ ತಲೆಗೆ ಅಪ್ಪಳಿಸಿತು.

ಚಹಾ ವಿರಾಮಕ್ಕೆ ಒಂದು ನಿಮಿಷ ಬಾಕಿ ಇದ್ದಾಗ ಈ ಘಟನೆ ನಡೆಯಿತು. ಕ್ರೀಸ್‌ನಲ್ಲೇ ಕುಸಿದು ಬಿದ್ದ ಎಲ್ಗರ್‌ ಅವರಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ತಂಡದ ವೈದ್ಯಕೀಯ ಸಿಬ್ಬಂದಿ, ಡೀನ್‌ ಅವರನ್ನು ಅಂಗಳದಿಂದ ಹೊರಗೆ ಕರೆದುಕೊಂಡು ಹೋದರು. ಅಂಗಳ ತೊರೆಯುವ ವೇಳೆ 29 ಎಸೆತಗಳಲ್ಲಿ 16ರನ್‌ ಗಳಿಸಿದ್ದ ಅವರು ಬಳಿಕ ಬ್ಯಾಟಿಂಗ್‌ಗೆ ಬರಲಿಲ್ಲ.

ಅವರ ಬದಲು ಕ್ರೀಸ್‌ಗೆ ಇಳಿದ ತೆವುನಿಶ್‌ ಡಿ ಬ್ರ್ಯೂನ್‌ (ಬ್ಯಾಟಿಂಗ್‌ 30; 42ಎ, 4ಬೌಂ, 1ಸಿ) ತಂಡಕ್ಕೆ ಆಸರೆಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.