ADVERTISEMENT

ಆಡಿದ ಹತ್ತು ಎಸೆತಗಳಲ್ಲೇ ಎರಡು ದಾಖಲೆ ಬರೆದ ಉಮೇಶ್‌ ಯಾದವ್‌

ಟೆಸ್ಟ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 14:44 IST
Last Updated 20 ಅಕ್ಟೋಬರ್ 2019, 14:44 IST
   

ರಾಂಚಿ:6 6 0 1 6 0 6 0 6 W

ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್‌ ಉಮೇಶ್‌ ಯಾದವ್‌ ಬ್ಯಾಟ್‌ ಬೀಸಿದ್ದು ಹೀಗೆ.

ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಒಟ್ಟು ಹತ್ತು ಎಸೆತಗಳನ್ನು ಎದುರಿಸಿ ಬಿರುಸಿನ ಆಟವಾಡಿದ ಉಮೇಶ್‌ ಯಾದವ್‌, ಎರಡು ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ADVERTISEMENT

ಹತ್ತು ಎಸೆತಗಳಲ್ಲಿ ಐದು ಸಿಕ್ಸರ್‌ ಸಹಿತ 31ರನ್‌ ಗಳಿಸಿದ ಯಾದವ್‌ 310ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದರು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಹತ್ತಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ ಯಾವುದೇ ಬ್ಯಾಟ್ಸ್‌ಮನ್‌ ದಾಖಲಿಸಿದ ಅತಿಹೆಚ್ಚಿನ ಸ್ಟ್ರೈಕ್‌ರೇಟ್‌ ಆಗಿದೆ.

ಮಾತ್ರವಲ್ಲ ಅತಿ ಕಡಿಮೆ ಎಸೆತಗಳಲ್ಲಿ 30 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಶ್ರೇಯವೂಉಮೇಶ್‌ ಅವರದ್ದಾಯಿತು. ನ್ಯೂಜಿಲೆಂಡ್‌ ತಂಡದ ಸ್ಟೀಫನ್‌ ಪ್ಲೆಮಿಂಗ್‌ ಅವರು 2004ರಲ್ಲಿ 11 ಎಸೆತಗಳಲ್ಲಿ 31ರನ್‌ ಸಿಡಿಸಿದ್ದರು. 1998ರಲ್ಲಿ ವೆಸ್ಟ್‌ ಇಂಡೀಸ್‌ ತಂಡದ ನಾಮ್‌ ಮೆಕ್‌ಲೀನ್‌ 12 ಎಸೆತಗಳಲ್ಲಿ 31 ರನ್‌ ಬಾರಿಸಿದ್ದರು. ಮೂವರೂ ಬ್ಯಾಟ್ಸ್‌ಮನ್‌ಗಳು ದಕ್ಷಿಣ ಆಫ್ರಿಕಾ ವಿರುದ್ಧವೇ ಈ ಸಾಧನೆ ಮಾಡಿರುವುದು ವಿಶೇಷ.

ಒಂಭತ್ತನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಯಾದವ್‌, ಮೊದಲ ಎಸೆತದಿಂದಲೇ ಸ್ಫೋಟಕ ಬ್ಯಾಟಿಂಗ್‌ ಮಾಡಿದರು.112 ಓವರ್‌ನಲ್ಲಿ ಚಾರ್ಜ್‌ ಲಿಂಡೆ ಎಸೆದ ಐದು ಮತ್ತು ಆರನೇ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟಿದರು. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಎದುರಿಸಿದ ಮೊದಲೆರಡು ಎಸೆತಗಳಲ್ಲಿ ಸಿಕ್ಸರ್‌ ಬಾರಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿದರು. ಈ ಹಿಂದೆಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹಾಗೂ ವೆಸ್ಟ್‌ ಇಂಡೀಸ್‌ನ ಮಾಜಿ ಕ್ರಿಕೆಟಿಗ ಫೊಫಿ ವಿಲಿಯಮ್ಸನ್‌ ಈ ಸಾಧನೆ ಮಾಡಿದ್ದರು.‌

ಬಳಿಕ 113ನೇ ಓವರ್‌ನಲ್ಲಿ ಎರಡು ಎಸೆತ ಆಡಿ 1 ರನ್‌ ಗಳಿಸಿದ ಉಮೇಶ್‌, ನಂತರದಓವರ್‌ನಲ್ಲಿಮತ್ತಷ್ಟು ಅಬ್ಬರಿಸಿದರು. ಮೂರು ಸಿಕ್ಸರ್‌ ಸಿಡಿಸಿಅಭಿಮಾನಿಗಳನ್ನು ರಂಜಿಸಿದರು.

ಪಂದ್ಯವು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ತಂಡ 9 ವಿಕೆಟ್‌ ನಷ್ಟಕ್ಕೆ 497 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಬ್ಯಾಟಿಂಗ್‌ ಆರಂಭಿಸಿರುವಆಫ್ರಿಕಾ ಪಡೆ ಐದು ಓವರ್‌ಗಳಲ್ಲಿ ಎರಡು ವಿಕೆಟ್‌ ಕಳೆದುಕೊಂಡು 9 ರನ್‌ ಗಳಿಸಿದೆ.

ಮಂದ ಬೆಳಕಿನ ಕಾರಣ ಎರಡನೇ ದಿನದಾಟವನ್ನು ಬೇಗನೆ ನಿಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.