ADVERTISEMENT

ಕ್ರಿಕೆಟ್‌: ಭಾರತ ಜಯಭೇರಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 18:28 IST
Last Updated 7 ಜನವರಿ 2020, 18:28 IST

ಬೆಂಗಳೂರು: ಕನ್ನಡಿಗರಾದ ಶುಭಾಂಗ್‌ ಹೆಗ್ಡೆ (ಔಟಾಗದೆ 26; 30ಎ, 1ಬೌಂ, 1ಸಿ) ಮತ್ತು (25ಕ್ಕೆ1) ಹಾಗೂ ವಿದ್ಯಾಧರ ಪಾಟೀಲ (31ಕ್ಕೆ2) ಅವರ ಉತ್ತಮ ಆಟದಿಂದಾಗಿ ಭಾರತದ 19 ವರ್ಷದೊಳಗಿನವರ ತಂಡ ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಮಂಗಳವಾರ ನಡೆದ ಚತುಷ್ಕೋನ ಏಕದಿನ ಕ್ರಿಕೆಟ್‌ ಸರಣಿಯ ನ್ಯೂಜಿಲೆಂಡ್‌ ಎದುರಿನ ಪಂದ್ಯದಲ್ಲಿ 120ರನ್‌ಗಳಿಂದ ಜಯಭೇರಿ ಮೊಳಗಿಸಿದೆ.

ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಸಿದ್ದೇಶ್‌ ವೀರ್‌ (71; 87ಎ, 6ಬೌಂ, 2ಸಿ) ಪದಾರ್ಪಣೆ ಪಂದ್ಯದಲ್ಲೇ ಅರ್ಧಶತಕ ಸಿಡಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್‌: ಭಾರತ; 50 ಓವರ್‌ಗಳಲ್ಲಿ 7 ವಿಕೆಟ್‌ಗೆ 252 (ಸಿದ್ದೇಶ್‌ ವೀರ್‌ 71, ತಿಲಕ್‌ ವರ್ಮಾ 59, ಶಾಶ್ವತ್‌ ರಾವತ್‌ 39, ಪ್ರಿಯಂ ಗರ್ಗ್‌ 19, ಶುಭಾಂಗ್‌ ಹೆಗ್ಡೆ ಔಟಾಗದೆ 26; ಹೇಡನ್‌ ಡಿಕ್ಸನ್‌ 33ಕ್ಕೆ1, ಬೆಕ್‌ಹ್ಯಾಂ ವೀಲ್ಹರ್‌ ಗ್ರೀನಲ್‌ 47ಕ್ಕೆ2, ಆದಿತ್ಯ ಅಶೋಕ್‌ 48ಕ್ಕೆ2, ಜೆಸ್‌ ಟಾಸ್ಕಾಫ್‌ 37ಕ್ಕೆ2).

ADVERTISEMENT

ನ್ಯೂಜಿಲೆಂಡ್‌: 35.5 ಓವರ್‌ಗಳಲ್ಲಿ 132 (ಜೆಸ್‌ ಟಾಸ್ಕಾಫ್‌ 29, ಬೆಕ್‌ಹ್ಯಾಂ ವೀಲ್ಹರ್‌ ಗ್ರೀನಲ್‌ 50, ಹೇಡನ್‌ ಡಿಕ್ಸನ್‌ ಔಟಾಗದೆ 12; ಸುಶಾಂತ್‌ ಮಿಶ್ರಾ 35ಕ್ಕೆ3, ರಕ್ಷನ್‌ 7ಕ್ಕೆ1, ವಿದ್ಯಾಧರ ಪಾಟೀಲ 31ಕ್ಕೆ2, ಶುಭಾಂಗ್‌ ಹೆಗ್ಡೆ 25ಕ್ಕೆ1, ಅಥರ್ವ ಅಂಕೋಲೆಕರ್‌ 16ಕ್ಕೆ3).

ಫಲಿತಾಂಶ: ಭಾರತ ತಂಡಕ್ಕೆ 120ರನ್‌ ಗೆಲುವು. ಪಂದ್ಯಶ್ರೇಷ್ಠ: ಸಿದ್ದೇಶ್‌ ವೀರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.