ಹೊವೆ: ‘ಬಾಲಪ್ರತಿಭೆ’ ವೈಭವ್ ಸೂರ್ಯವಂಶಿ ಮತ್ತು ಅಭಿಗ್ಯಾನ್ ಕುಂದು ಅವರ ಅಮೋಘ ಆಟದ ಬಲದಿಂದ ಭಾರತ 19 ವರ್ಷದೊಳಗಿನವರ ತಂಡವು ಇಂಗ್ಲೆಂಡ್ 19 ವರ್ಷದೊಳಗಿನವರ ತಂಡದ ಎದುರಿನ ಏಕದಿನ ಪಂದ್ಯದಲ್ಲಿ ಜಯಿಸಿತು. ಐದು ಪಂದ್ಯಗಳ ಯೂತ್ ಸರಣಿಯಲ್ಲಿ 1–0 ಮುನ್ನಡೆ ಪಡೆಯಿತು.
ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡವು ರಾಕಿ ಫ್ಲಿಂಟಾಫ್ (56; 90ಎ, 4X3, 6X3) ಅವರ ಅರ್ಧಶತಕದ ಬಲದಿಂದ 42.2 ಓವರ್‌ಗಳಲ್ಲಿ 174 ರನ್ ಗಳಿಸಿತು. ಆರಂಭಿಕ ಬ್ಯಾಟರ್ ವೈಭವ್ (48; 19ಎ, 4X3, 6X5) ಮತ್ತು ಅಭಿಗ್ಯಾನ್ ಕುಂದು (ಅಜೇಯ 45; 34ಎ, 4X4, 6X1) ಅವರ ಚೆಂದದ ಬ್ಯಾಟಿಂಗ್‌ನಿಂದ ತಂಡವು 24 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 178 ರನ್ ಗಳಿಸಿ ಗೆದ್ದಿತು. ಭಾರತತಂಡವು 6 ವಿಕೆಟ್‌ಗಳಿಂದ ಜಯಿಸಿತು.
ಈಚೆಗೆ ಐಪಿಎಲ್‌ನಲ್ಲಿ 14 ವರ್ಷದ ವೈಭವ್ ಅವರು ಶತಕ ಬಾರಿಸಿ ಗಮನ ಸೆಳೆದಿದ್ದರು.
ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್: 42.2 ಓವರ್‌ಗಳಲ್ಲಿ 174 (ರಾಕಿ ಫ್ಲಿಂಟಾಫ್ 56, ಇಸಾಕ್ ಮೊಹಮ್ಮದ್ 42, ಕನಿಷ್ಕ ಚೌಹಾಣ್ 20ಕ್ಕೆ3, ಮೊಹಮ್ಮದ್ ಇನಾನ್ 37ಕ್ಕೆ2, ಆರ್. ಅಂಬರೀಶ್ 24ಕ್ಕೆ2, ಹೆನಿಲ್ ಪಟೇಲ್ 41ಕ್ಕೆ2) ಭಾರತ: 24 ಓವರ್‌ಗಳಲ್ಲಿ 4ಕ್ಕೆ178 (ವೈಭವ್ ಸೂರ್ಯವಂಶಿ 48, ಅಭಿಗ್ಯಾನ್ ಕುಂದು ಔಟಾಗದೇ 45, ಆಯುಷ್ ಮ್ಹಾತ್ರೆ 21) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.