ADVERTISEMENT

ಮೂರನೇ ಸ್ಥಾನದಲ್ಲಿ ಮಂದಾನ ಸ್ಥಿರ

ಐಸಿಸಿ ಟಿ20 ಮಹಿಳಾ ರ‍್ಯಾಂಕಿಂಗ್‌: ಅಗ್ರಸ್ಥಾನ ಕಳೆದುಕೊಂಡ ಶೆಫಾಲಿ

ಪಿಟಿಐ
Published 12 ಅಕ್ಟೋಬರ್ 2021, 11:06 IST
Last Updated 12 ಅಕ್ಟೋಬರ್ 2021, 11:06 IST
ಶೆಫಾಲಿ ವರ್ಮಾ– ಎಎಫ್‌ಪಿ ಚಿತ್ರ
ಶೆಫಾಲಿ ವರ್ಮಾ– ಎಎಫ್‌ಪಿ ಚಿತ್ರ   

ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಅವರು ಐಸಿಸಿ ಟಿ20 ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಸ್ಮೃತಿ ಮಂದಾನ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಶೆಫಾಲಿ ಅವರ ಬಳಿ ಸದ್ಯ 726 ರೇಟಿಂಗ್‌ ಪಾಯಿಂಟ್ಸ್ ಇದ್ದರೆ, ಮಂದಾನ 709 ಪಾಯಿಂಟ್ಸ್ ಹೊಂದಿದ್ದಾರೆ. ಆಸ್ಟ್ರೇಲಿಯಾದ ಬೇಥ್ ಮೂನಿ (754) ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ತಂಡ ನಾಯಕಿ ಮೆಗ್‌ ಲ್ಯಾನಿಂಗ್‌ (4ನೇ ಸ್ಥಾನ) ಹಾಗೂ ಅಲೀಸಾ ಹೀಲಿ (ಆರನೇ ಸ್ಥಾನ) ಕೂಡ ಅಗ್ರ 10ರ ಪಟ್ಟಿಯಲ್ಲಿದ್ದಾರೆ.

ನ್ಯೂಜಿಲೆಂಡ್‌ನ ಸೋಫಿ ಡಿವೈನ್‌ ಮತ್ತು ಸುಜಿ ಬೇಟ್ಸ್ ಕ್ರಮವಾಗಿ ಐದು ಮತ್ತು ಏಳನೇ ಕ್ರಮಾಂಕಗಳಲ್ಲಿದ್ದಾರೆ.

ADVERTISEMENT

ಬೌಲರ್‌ಗಳ ವಿಭಾಗದಲ್ಲಿ ಭಾರತದ ರಾಜೇಶ್ವರಿ ಗಾಯಕವಾಡ್‌ 12ನೇ ಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಅವರು ಒಟ್ಟು ಐದು ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದರು. ಆಲ್‌ರೌಂಡರ್‌ ವಿಭಾಗದಲ್ಲಿ ಆಸ್ಟ್ರೇಲಿಯಾದ ಆ್ಯಶ್ಲಿ ಗಾರ್ಡನರ್‌ 10ನೇ ಸ್ಥಾನದಲ್ಲಿದ್ದಾರೆ. ಅದೇ ತಂಡದ ಜಾರ್ಜಿಯಾ ವಾರೆಹಮ್‌ 14 ಸ್ಥಾನಗಳ ಏರಿಕೆ ದಾಖಲಿಸಿದ್ದು, ಸದ್ಯ ಜೀವನಶ್ರೇಷ್ಠ 48ನೇ ಸ್ಥಾನಕ್ಕೇರಿದ್ದಾರೆ.

ಭಾರತದ ಎದುರು ಅವರು ಮೂರು ಪಂದ್ಯಗಳಲ್ಲಿ 23 ರನ್‌ ಹಾಗೂ ಮೂರು ವಿಕೆಟ್‌ ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.