ಇಂಟರ್ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆದ ವಿಜಯ ಕ್ರಿಕೆಟ್ ಕ್ಲಬ್.
ಬೆಂಗಳೂರು: ಆದರ್ಶ್ ಎಸ್.ಜೆ. (132 ರನ್) ಅವರ ಶತಕದ ನೆರವಿನಿಂದ ವಿಜಯ ಕ್ರಿಕೆಟ್ ಕ್ಲಬ್ ತಂಡವು ಕೆಎಸ್‌ಸಿಎ ಗುಂಪು 1ರ (ಡಿವಿಷನ್ 1, 2, 3) 19 ವರ್ಷದೊಳಗಿನವರ ಇಂಟರ್‌ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಫೈನಲ್ ಪಂದ್ಯದಲ್ಲಿ ವಿಜಯ ಕ್ರಿಕೆಟ್ ತಂಡವು ಮೂರು ವಿಕೆಟ್‌ಗಳಿಂದ ವಲ್ಚರ್ಸ್ ಕ್ರಿಕೆಟ್ ಕ್ಲಬ್ ತಂಡವನ್ನು ಮಣಿಸಿತು. ಮೊದಲು ಬ್ಯಾಟಿಂಗ್ ಮಾಡಿದ ವಲ್ಚರ್ಸ್ 49.2 ಓವರ್‌ಗಳಲ್ಲಿ 263 ರನ್ ಗಳಿಸಿತು. ಗುರಿಯನ್ನು ಬೆನ್ನತ್ತಿದ ವಿಜಯ ಕ್ರಿಕೆಟ್ ತಂಡವು ಐದು ಎಸೆತಗಳು ಬಾಕಿ ಇರುವಂತೆ ಏಳು ವಿಕೆಟ್‌ಗೆ 264 ರನ್ ಗಳಿಸಿ ಜಯ ಸಾಧಿಸಿತು.
ವಲ್ಚರ್ಸ್ ಕ್ರಿಕೆಟ್ ಕ್ಲಬ್: 49.2 ಓವರ್‌ಗಳಲ್ಲಿ 263 (ಅರ್ಣವ್ ಮಿಶ್ರಾ 87, ತೇಜಸ್ ರೆಡ್ಡಿ 54; ಧ್ಯಾನ್ ಮಹೇಶ್ ಹಿರೇಮಠ 39ಕ್ಕೆ 3, ಅನಿಕೇತ್ ರೆಡ್ಡಿ 38ಕ್ಕೆ 2, ಚೇತನ್ ರಂಗರಾಜ್ 48ಕ್ಕೆ 3).
ವಿಜಯ ಕ್ರಿಕೆಟ್ ಕ್ಲಬ್: 49.1 ಓವರ್‌ಗಳಲ್ಲಿ 7 ವಿಕೆಟ್‌ಗೆ 264 (ಆದರ್ಶ್ ಎಸ್.ಜೆ 132, ಪ್ರಣವ್ ಕೆದ್ಲಾಯ 82; ಸಮ್ಯಕ್ ವೆಲ್ಲಲೂರ್ 46ಕ್ಕೆ 5).
ಫಲಿತಾಂಶ: ವಿಜಯ ಕ್ರಿಕೆಟ್ ಕ್ಲಬ್‌ಗೆ ಮೂರು ವಿಕೆಟ್ ಜಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.