ಬೆಂಗಳೂರು: ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಅವರನ್ನು ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ಸಂಭವನೀಯರ ತಂಡದಿಂದ ಕೈಬಿಡಲಾಗಿದೆ.
2008ರಲ್ಲಿ ಕರ್ನಾಟಕ ತಂಡಕ್ಕೆ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಮಾಡಿದ್ದ ಪಾಂಡೆ ಭಾರತ ತಂಡವನ್ನೂ ಪ್ರತಿನಿಧಿಸಿದ್ದಾರೆ. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದವರು. ಕಳೆದ ಒಂದೂವರೆ ದಶಕದಿಂದ ತಂಡದಲ್ಲಿದ್ದರು. ಈಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಮತ್ತು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯಗಳಲ್ಲಿ ಮನೀಷ್ ಫಾರ್ಮ್‌ನಲ್ಲಿರಲಿಲ್ಲ. ಅದರಿಂದಾಗಿ ಅವರನ್ನು ಏಕದಿನ ಟೂರ್ನಿಗೆ ಆಯ್ಕೆ ಮಾಡಿಲ್ಲ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.
35 ವರ್ಷದ ಮನೀಷ್ ಕರ್ನಾಟಕ ತಂಡದ ಹಲವು ಸ್ಮರಣೀಯ ಸಾಧನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೂರು ಮಾದರಿಗಳಲ್ಲಿಯೂ ಕರ್ನಾಟಕವು ಟ್ರೋಫಿ ಜಯಿಸಲು ಅವರ ಕಾಣಿಕೆಯೂ ಇತ್ತು. ಅವರು 118 ಪ್ರಥಮ ದರ್ಜೆ ಪಂದ್ಯಗಳಿಂದ 7973 ರನ್ ಗಳಿಸಿದ್ದಾರೆ. ಅದರಲ್ಲಿ 25 ಶತಕ, 32 ಅರ್ಧಶತಕಗಳು ಇವೆ. 50.78ರ ಸರಾಸರಿಯಲ್ಲಿ ರನ್ ಕಲೆಹಾಕಿದ್ದಾರೆ.
ಲಿಸ್ಟ್ ಎ ಮಾದರಿಯಲ್ಲಿ 192 ಪಂದ್ಯಗಳಿಂದ 6310 ರನ್ ಪೇರಿಸಿದ್ದಾರೆ. 10 ಶತಕ, 39 ಅರ್ಧಶತಕಗಳು ಇವೆ. 45.39 ಸರಾಸರಿ ಹೊಂದಿದ್ದಾರೆ.
ಸಂಭವನೀಯರ ತಂಡದಲ್ಲಿ ಹೊಸಪ್ರತಿಭೆಗಳಿಗೆ ಮಣೆ ಹಾಕಲಾಗಿದೆ. ಶಿಖರ್ ಶೆ್ಟ್ಟಿ, ಹರ್ಷಿಲ್ ಧಮಾನಿ, ಕೃತಿಕ್ ಕೃಷ್ಣ ಅವರಿಗೆ ಅವಕಾಶ ನೀಡಲಾಗಿದೆ.
ಜೆ. ಅಭಿರಾಮ್ ನೇತೃತ್ವದ ಆಯ್ಕೆ ಸಮಿತಿಯು 32 ಆಟಗಾರರ ಸಂಭಾವ್ಯ ತಂಡವನ್ನು ಆಯ್ಕೆ ಮಾಡಿದೆ.
ಸಂಭಾವ್ಯ ತಂಡ: ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ಪ್ರಸಿದ್ಧ ಎಂ ಕೃಷ್ಣ, ದೇವದತ್ತ ಪಡಿಕ್ಕಲ್, ಎಲ್.ಆರ್. ಚೇತನ್, ಮೆಕ್‌ನಿಲ್ ಎಚ್ ನೊರೊನಾ, ಶ್ರೇಯಸ್ ಗೋಪಾಲ್, ಕೆ.ಎಲ್. ಶ್ರೀಜಿತ್ (ವಿಕೆಟ್‌ಕೀಪರ್), ಅಭಿನವ್ ಮನೋಹರ್, ಮನೋಜ್ ಬಾಂಢಗೆ, ಹಾರ್ದಿಕ್ ರಾಜ್, ವಿ. ಕೌಶಿಕ್, ವಿದ್ಯಾಧರ್ ಪಾಟೀಲ, ಶುಭಾಂಗ್ ಹೆಗ್ಡೆ, ಅಭಿಲಾಷ್ ಶೆಟ್ಟಿ, ಮೊಹಸೀನ್ ಖಾನ್, ಆರ್. ಸ್ಮರಣ್, ಲವನೀತ್ ಸಿಸೊಡಿಯಾ (ವಿಕೆಟ್‌ಕೀಪರ್), ವೈಶಾಖ ವಿಜಯಕುಮಾರ್, ಎಲ್. ಮನ್ವಂತ್ ಕುಮಾರ್, ಯಶೋವರ್ಧನ್ ಪರಂತಾಪ್, ಪ್ರವೀಣ ದುಬೆ, ಎಂ. ವೆಂಕಟೇಶ್, ನಿಕಿನ್ ಜೋಸ್, ಕೆ.ವಿ. ಅನೀಶ್, ಕೆ. ಶಶಿಕುಮಾರ್, ಪಾರಸ್ ಗುರುಭಕ್ಷ್ ಆರ್ಯ, ಶಿಖರ್ ಶೆಟ್ಟಿ, ಕಿಶನ್ ಬೆದಾರೆ, ಹರ್ಷಿಲ್ ಧರ್ಮಾನಿ, ವಿದ್ವತ್ ಕಾವೇರಪ್ಪ, ಕೃತಿಕ್ ಕೃಷ್ಣ (ವಿಕೆಟ್‌ಕೀಪರ್).
ಕೋಚ್: ಯರೇಗೌಡ,
ಬೌಲಿಂಗ್ ಕೋಚ್: ಮನ್ಸೂರ್ ಅಲಿಖಾನ್,
ಫೀಲ್ಡಿಂಗ್ ಕೋಚ್: ಶಬರೀಶ್ ಮೋಹನ್,
ಮ್ಯಾನೇಜರ್: ಎ. ರಮೇಶ್ ರಾವ್,
ಫಿಸಿಯೊ: ಜಾಬ ಪ್ರಭು,
ಸ್ಟ್ರೆಂಥ್–ಕಂಡಿಷನಿಂಗ್ ಕೋಚ್: ಎ. ಕಿರಣ,
ಮಸಾಜ್: ಸಿ.ಎಂ. ಸೋಮಸುಂದರ್,
ವಿಡಿಯೊ ಅನಾಲಿಸ್ಟ್: ಗಿರಿಪ್ರಸಾದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.