ADVERTISEMENT

ವಿಜಯ್‌ ಹಜಾರೆ ಟ್ರೋಫಿ: ಪಂಜಾಬ್‌ ತಂಡದಲ್ಲಿ ಗಿಲ್‌, ಅಭಿಷೇಕ್‌, ಅರ್ಷದೀಪ್‌

ಪಿಟಿಐ
Published 22 ಡಿಸೆಂಬರ್ 2025, 22:30 IST
Last Updated 22 ಡಿಸೆಂಬರ್ 2025, 22:30 IST
ಶುಭಮನ್‌ ಗಿಲ್‌ –‍ಪಿಟಿಐ ಚಿತ್ರ
ಶುಭಮನ್‌ ಗಿಲ್‌ –‍ಪಿಟಿಐ ಚಿತ್ರ   

ಚಂಡೀಗಢ: ಭಾರತ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ ತಂಡದ ನಾಯಕ ಶುಭಮನ್‌ ಗಿಲ್‌, ಸ್ಫೋಟಕ ಬ್ಯಾಟರ್‌ ಅಭಿಷೇಕ್‌ ಶರ್ಮಾ ಹಾಗೂ ವೇಗಿ ಅರ್ಷದೀಪ್‌ ಸಿಂಗ್‌ ಅವರು ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಆಡುವ ಪಂಜಾಬ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ರಾಷ್ಟ್ರೀಯ ತಂಡದ ಆಟಗಾರರು ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕನಿಷ್ಠ ಎರಡು ಪಂದ್ಯಗಳಲ್ಲಾದರೂ ಆಡಬೇಕು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ತಾಕೀತು ಮಾಡಿದೆ. ಹೀಗಾಗಿ, ನಾಯಕ ಗಿಲ್‌ ಸೇರಿ ಎಲ್ಲ ಆಟಗಾರರು ಟೂರ್ನಿಯಲ್ಲಿ ಕಡ್ಡಾಯವಾಗಿ ಆಡಬೇಕಿದೆ. 

2026ರ ಟಿ20 ವಿಶ್ವಕಪ್‌ನಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಗಿಲ್‌ ಅವರು ದೇಶಿ ಏಕದಿನ ಟೂರ್ನಿಯಲ್ಲಿ ಕೆಲವು ಪಂದ್ಯಗಳಿಗೆ ಲಭ್ಯರಾಗುವ ಸಾಧ್ಯತೆ ಇದೆ.

ADVERTISEMENT

ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯು ಸೋಮವಾರ 18 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ, ತಂಡದ ನಾಯಕತ್ವವನ್ನು ಯಾರು ವಹಿಸಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿಲ್ಲ.

ತಂಡ ಹೀಗಿದೆ: ಶುಭಮನ್‌ ಗಿಲ್‌, ಅಭಿಷೇಕ್‌ ಶರ್ಮಾ, ಅರ್ಷದೀಪ್‌ ಸಿಂಗ್‌, ಪ್ರಭಸಿಮ್ರನ್‌ ಸಿಂಗ್‌ (ವಿಕೆಟ್‌ಕೀಪರ್‌), ಹರ್ನೂರ್‌ ಪನ್ನು, ಅನ್ಮೋಲ್‌ಪ್ರೀತ್‌ ಸಿಂಗ್‌, ಉದಯ್‌ ಸಹರನ್‌, ನಮನ್‌ ಧೀರ್‌, ಸಲೀಲ್‌ ಅರೋರಾ (ವಿಕೆಟ್‌ಕೀಪರ್‌), ಸನ್ವೀರ್ ಸಿಂಗ್‌, ರಮಣ್‌ದೀಪ್‌ ಸಿಂಗ್‌, ಜಶನ್‌ಪ್ರೀತ್‌ ಸಿಂಗ್‌, ಗುರ್ನೂರ್‌ ಬ್ರಾರ್‌, ಹರಪ್ರೀತ್‌ ಬ್ರಾರ್‌, ರಘು ಶರ್ಮಾ, ಕ್ರಿಶ್‌ ಭಗತ್‌, ಗೌರವ್‌ ಚೌಧರಿ ಹಾಗೂ ಸುಖದೀಪ್‌ ಬಾಜ್ವಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.