ADVERTISEMENT

ಮಲ್ಯ ವಿರುದ್ಧ ‘ಚೋರ್‌ ಹೈ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2019, 19:45 IST
Last Updated 10 ಜೂನ್ 2019, 19:45 IST
ವಿಜಯ್ ಮಲ್ಯ ಮತ್ತು ಪುತ್ರ ಸಿದ್ಧಾರ್ಥ್ ಮಲ್ಯ  –ಫೇಸ್‌ಬುಕ್ ಚಿತ್ರ
ವಿಜಯ್ ಮಲ್ಯ ಮತ್ತು ಪುತ್ರ ಸಿದ್ಧಾರ್ಥ್ ಮಲ್ಯ –ಫೇಸ್‌ಬುಕ್ ಚಿತ್ರ   

ಲಂಡನ್‌: ಭಾನುವಾರ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್‌ ಪಂದ್ಯವನ್ನು ವೀಕ್ಷಿಸಿ ಕ್ರೀಡಾಂಗಣದಿಂದ ಹೊರಬರುತ್ತಿದ್ದ ಉದ್ಯಮಿ ವಿಜಯ್‌ ಮಲ್ಯ ಅವರನ್ನು ನೋಡಿದ ಜನರು ‘ಚೋರ್‌ ಹೈ’ ಎಂದು ಘೋಷಣೆ ಕೂಗಿದ್ದಾರೆ.

ಮಲ್ಯ ಅವರನ್ನು ಸುತ್ತುವರಿದ ಸಣ್ಣ ಗುಂಪು, ‘ಚೋರ್‌ ಹೈ’, ‘ಮನುಷ್ಯನಾಗಿದ್ದರೆ ನೀನು, ನಿನ್ನ ದೇಶದ ಕ್ಷಮೆ ಕೋರು’ ಎಂದು ಘೋಷಣೆ ಕೂಗಿದ್ದು ವಿಡಿಯೊದಲ್ಲಿ ದಾಖಲಾಗಿದೆ.‘ನಾನು ಪಂದ್ಯ ವೀಕ್ಷಿಸಲು ಇಲ್ಲಿಗೆ ಬಂದಿದ್ದೇನೆ. ನನ್ನ ವಿರುದ್ಧದ ಪ್ರಕರಣ ಕುರಿತು ಜುಲೈನಲ್ಲಿ ನಡೆಯುವ ಮುಂದಿನ ವಿಚಾರಣೆಗೆ ಸಿದ್ಧತೆ ನಡೆದಿವೆ’ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.