ADVERTISEMENT

ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ–ಅನುಷ್ಕಾ ದಂಪತಿ?

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2024, 14:44 IST
Last Updated 3 ಫೆಬ್ರುವರಿ 2024, 14:44 IST
<div class="paragraphs"><p>ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ</p></div>

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ

   

ಬೆಂಗಳೂರು: ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಈ ಕುರಿತು ಮಾಜಿ ಕ್ರಿಕೆಟಿಗ ಎಬಿ ಡಿ'ವಿಲಿಯರ್ಸ್ ಅವರ ಹೇಳಿಕೆ ಆಧರಿಸಿ ಎನ್‌ಡಿಟಿವಿ ವೆಬ್‌ಸೈಟ್ ವರದಿ ಮಾಡಿದೆ.

ADVERTISEMENT

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮೊದಲ ಎರಡು ಪಂದ್ಯಗಳಿಂದ ವಿರಾಟ್ ಕೊಹ್ಲಿ ಅವರು ದೂರ ಉಳಿದಿದ್ದಾರೆ. ಅವರು ವೈಯಕ್ತಿಕ ಕಾರಣಗಳಿಂದ ದೂರ ಉಳಿದಿದ್ದಾಗಿ ಬಿಸಿಸಿಐ ಕೂಡ ಹೇಳಿತ್ತು.

ಯೂಟ್ಯೂಬ್ ಚಾನಲ್ ಲೈವ್ ವೇಳೆ ಅಭಿಮಾನಿಯೊಬ್ಬರು ಡಿ'ವಿಲಿಯರ್ಸ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದರು. ‘ವಿರಾಟ್ ಕೊಹ್ಲಿ ಅವರಿಗೆ ಏನಾಯಿತು?‘ ಎಂಬ ವಿಷಯ ಪ್ರಸ್ತಾಪಿಸಿದಾಗ, ‘ಅವರಿಗೆ ಏನೂ ಆಗಿಲ್ಲ, ಇದೀಗ ಅವರು ಮತ್ತೊಂದು ಸಂಭ್ರಮವನ್ನು ಎದುರು ನೋಡುತ್ತಿದ್ದಾರೆ. ಯೆಸ್.. ವಿರುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಂತಹ ಸಮಯದಲ್ಲಿ ಕುಟುಂಬಕ್ಕೆ ಸೂಕ್ತ ಸಮಯ ಕೊಡುತ್ತಿರುವ ಅವರನ್ನು ನಾನು ಮೆಚ್ಚಿಕೊಳ್ಳುತ್ತೇನೆ’ ಎಂದು ಡಿ'ವಿಲಿಯರ್ಸ್ ಹೇಳಿದ್ದಾರೆ.

2017 ರಲ್ಲಿ ಪ್ರೇಮವಿವಾಹವಾಗಿದ್ದ ವಿರುಷ್ಕಾ ದಂಪತಿಗೆ ವಮಿಕಾ ಎಂಬ ಹೆಣ್ಣು ಮಗುವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.