ADVERTISEMENT

Photo| ಕೊಹ್ಲಿಗೆ 100ನೇ ಟೆಸ್ಟ್‌: ವಿಶೇಷ ಕ್ಯಾಪ್‌ ಪ್ರದಾನದ ವೇಳೆ ವಿರಾಟ್‌–ಅನುಷ್ಕಾ ಸಂಭ್ರಮ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಇಂದು ತಮ್ಮ 100ನೇ ಟೆಸ್ಟ್‌ ಆಡುತ್ತಿದ್ದಾರೆ.‘ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌’ ವತಿಯಿಂದವಿಶೇಷ ಕ್ಯಾಪ್‌ ಅನ್ನು ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ವಿರಾಟ್‌ ಕೊಹ್ಲಿ ಅವರಿಗೆ ಪ್ರದಾನ ಮಾಡಿದರು.ಈ ಅವಿಸ್ಮರಣೀಯ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಆತ್ಮೀಯವಾಗಿ ಕಂಡರು.ಕ್ಯಾಪ್‌ ಸ್ವೀಕರಿಸಿದ ವಿರಾಟ್‌ ಕೊಹ್ಲಿ ಅವರನ್ನು ಅನುಷ್ಕಾ ಅವರು ಆಲಂಗಿಸಿಕೊಳ್ಳುವ ಮೂಲಕ ಅಭಿನಂದಿಸಿದರು.ಭಾರತ ಮತ್ತು ಶ್ರೀಲಂಕಾದ ನಡುವೆ ಮೊಹಾಲಿಯಲ್ಲಿ ಇಂದು ಮೊದಲ ಟೆಸ್ಟ್‌ ಪಂದ್ಯ ನಡೆಯುತ್ತಿದೆ.ಎರಡು ಟೆಸ್ಟ್‌ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ 7962 ರನ್‌ ಗಳಿಸಿದ್ದು, 8000 ರನ್‌ಗಳ ಗಡಿಯಲ್ಲಿದ್ದಾರೆ.

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 5:46 IST
Last Updated 4 ಮಾರ್ಚ್ 2022, 5:46 IST
100ನೇ ಟೆಸ್ಟ್‌ ಹಿನ್ನೆಲೆಯಲ್ಲಿ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌ನಿಂದ ವಿರಾಟ್‌ ಕೊಹ್ಲಿ ಅವರಿಗೆ ವಿಶೇಷ ಕ್ಯಾಪ್‌ ಪ್ರದಾನ ಮಾಡಿದ್ದು, ಈ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಆತ್ಮೀಯವಾಗಿ ಕಂಡರು. (ಎಎಫ್‌ಪಿ ಚಿತ್ರ)
100ನೇ ಟೆಸ್ಟ್‌ ಹಿನ್ನೆಲೆಯಲ್ಲಿ ಪಂಜಾಬ್‌ ಕ್ರಿಕೆಟ್‌ ಅಸೋಸಿಯೇಷನ್‌ನಿಂದ ವಿರಾಟ್‌ ಕೊಹ್ಲಿ ಅವರಿಗೆ ವಿಶೇಷ ಕ್ಯಾಪ್‌ ಪ್ರದಾನ ಮಾಡಿದ್ದು, ಈ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ದಂಪತಿ ಆತ್ಮೀಯವಾಗಿ ಕಂಡರು. (ಎಎಫ್‌ಪಿ ಚಿತ್ರ)   
ವಿರಾಟ್‌ ಕೊಹ್ಲಿ ಅವರಿಗೆ ಕೋಚ್‌ ರಾಹುಲ್‌ ದ್ರಾವಿಡ್‌ ಅವರಿಂದ ವಿಶೇಷ ಕ್ಯಾಪ್‌ ಪ್ರದಾನ (ಐಎಎನ್‌ಎಸ್‌)
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಅವರು ಇಂದು ತಮ್ಮ 100ನೇ ಟೆಸ್ಟ್‌ ಆಡುತ್ತಿದ್ದಾರೆ. (ಎಎಫ್‌ಪಿ ಚಿತ್ರ)
ಟೀಂ ಇಂಡಿಯಾ ಪರ 100ಟೆಸ್ಟ್‌ ಆಡುತ್ತಿರುವ ಭಾರತದ ಮೂರನೇ ಆಟಗಾರ ವಿರಾಟ್‌ ಕೊಹ್ಲಿ. (ಐಎಎನ್‌ಎಸ್‌)
ಈ ಅವಿಸ್ಮರಣೀಯ ಸಂದರ್ಭದಲ್ಲಿ ವಿರಾಟ್‌ ಕೊಹ್ಲಿ ಮತ್ತು ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಆತ್ಮೀಯವಾಗಿ ಕಂಡರು. (ಐಎಎನ್‌ಎಸ್‌)
ಕ್ಯಾಪ್‌ ಸ್ವೀಕರಿಸಿದ ವಿರಾಟ್‌ ಕೊಹ್ಲಿ ಅವರನ್ನು ಅನುಷ್ಕಾ ಅವರು ಅಪ್ಪಿಕೊಳ್ಳುವ ಮೂಲಕ ಅಭಿನಂದಿಸಿದರು. (ಎಎಫ್‌ಪಿ ಚಿತ್ರ)
ಕ್ಯಾಪ್‌ ಸ್ವೀಕರಿಸಿದ ವಿರಾಟ್‌ ಕೊಹ್ಲಿ ಅವರನ್ನು ಅನುಷ್ಕಾ ಅವರು ಆಲಂಗಿಸಿಕೊಳ್ಳುವ ಮೂಲಕ ಅಭಿನಂದಿಸಿದರು.
ಕ್ಯಾಪ್‌ ಸ್ವೀಕರಿಸಿದ ವಿರಾಟ್‌ ಕೊಹ್ಲಿ ಅವರನ್ನು ಅನುಷ್ಕಾ ಅವರು ಆಲಂಗಿಸಿಕೊಳ್ಳುವ ಮೂಲಕ ಅಭಿನಂದಿಸಿದರು. (ಎಎಫ್‌ಪಿ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.