ADVERTISEMENT

ದ್ರಾವಿಡ್ ಜೊತೆಗೆ ‘ಫುಟ್‌ವಾಲಿ’ ಆಡಿ ಸಂಭ್ರಮಿಸಿದ ಭಾರತ ಕ್ರಿಕೆಟ್ ತಂಡದ ಆಟಗಾರರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2021, 10:03 IST
Last Updated 18 ಡಿಸೆಂಬರ್ 2021, 10:03 IST
   

ಜೋಹಾನ್ಸ್‌ಬರ್ಗ್: ಡಿಸೆಂಬರ್ 26ರಂದು ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಗೆ ಚಾಲನೆ ಸಿಗಲಿದೆ. ಅದಕ್ಕೂ ಮುನ್ನ, ಶನಿವಾರ ಆಟಗಾರರು ಫುಟ್‌ವಾಲಿ ಆಡುವ ಮೂಲಕ ಸಂತಸಪಟ್ಟರು.

ಟೆಸ್ಟ್ ಸರಣಿಗೂ ಮುನ್ನ ಕಠಿಣ ಅಭ್ಯಾಸದಲ್ಲಿ ತೊಡಗಿರುವ ತಂಡದ ಸದಸ್ಯರು, ಅದರ ಜೊತೆಗೆ ಕೊಂಚ ರಿಲ್ಯಾಕ್ಸ್‌ ಮಾಡಿಕೊಳ್ಳುತ್ತಿದ್ಧಾರೆ. ವಿಡಿಯೊವನ್ನು ಬಿಸಿಸಿಐಟ್ವಿಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ನಾಯಕ ವಿರಾಟ್ ಕೊಹ್ಲಿ, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಭ್ ಪಂತ್, ವೇಗಿ ಇಶಾಂತ್ ಶರ್ಮಾ, ಕೆ.ಎಲ್. ರಾಹುಲ್ ಸೇರಿದಂತೆ ಹಲವು ಆಟಗಾರರು ಫುಟ್‌ವಾಲಿ ಆಡುವ ಮೂಲಕ ಲಘು ವ್ಯಾಯಾಮದ ಜೊತೆ ಬದಲಾವಣೆಯ ಖುಷಿ ಅನುಭವಿಸಿದರು.

ADVERTISEMENT

ಸದ್ಯ, ನಡೆಯುತ್ತಿರುವ ನಾಯಕತ್ವ ವಿವಾದದಿಂದಾಗಿ ಆಟಗಾರರಲ್ಲಿ ಬೇಸರ ಮೂಡಿದೆ. ಈ ಸಂದರ್ಭ ಈ ರೀತಿಯ ಸಂತಸದ ಕ್ಷಣಗಳು ಆಟಗಾರರಿಗೆ ಮಹತ್ವದ್ದಾಗಿವೆ.

ಪ್ರವಾಸ ಆರಂಭಕ್ಕೂ ಮುನ್ನ ವಿವಾದದಿಂದ ಹೆಚ್ಚು ಸುದ್ದಿಯಾಗಿದ್ದ ನಾಯಕ ವಿರಾಟ್ ಕೊಹ್ಲಿ, ಆಟಗಾರರ ಜೊತೆ ಖುಷಿಯಿಂದ ಫುಟ್‌ವಾಲಿ ಆಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಜನವರಿ 3ರಿಂದ 7ರವರೆಗೆ ಜೋಹಾನ್ಸ್‌ಬರ್ಗ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ಮತ್ತು ಜನವರಿ 11ರಿಂದ 15ರವರೆಗೆ ಕೇಪ್ ಟೌನ್‌ನಲ್ಲಿ 3ನೇ ಟೆಸ್ಟ್ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.