ADVERTISEMENT

ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ದಾಂಪತ್ಯದಲ್ಲಿ ಬಿರುಕು?

ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2025, 9:38 IST
Last Updated 24 ಜನವರಿ 2025, 9:38 IST
<div class="paragraphs"><p>ವೀರೇಂದ್ರ ಸೆಹ್ವಾಗ್ ಹಾಗೂ ಆರತಿ</p></div>

ವೀರೇಂದ್ರ ಸೆಹ್ವಾಗ್ ಹಾಗೂ ಆರತಿ

   

ಇನ್‌ಸ್ಟಾಗ್ರಾಂ

ಬೆಂಗಳೂರು: ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ADVERTISEMENT

ವೀರೇಂದ್ರ ಸೆಹ್ವಾಗ್ ಹಾಗೂ ಅವರ ಪತ್ನಿ ಆರತಿ ಅಹಲ್‌ವಾತ್ ಅವರು ಕೆಲ ತಿಂಗಳುಗಳಿಂದ ಪರಸ್ಪರ ಪ್ರತ್ಯೇಕವಾಗಿದ್ದಾರೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ಇಂಗ್ಲಿಷ್ ವೆಬ್‌ಸೈಟ್ ವರದಿ ಮಾಡಿದೆ.

ಸೆಹ್ವಾಗ್, ಆರತಿ ಅವರನ್ನು 2004ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಆರ್ಯವೀರ್ ಹಾಗೂ ವೇದಾಂತ್ ಎಂಬ ಇಬ್ಬರು ಮಕ್ಕಳಿದ್ದಾರೆ.

‘ಇತ್ತೀಚೆಗೆ ಸೆಹ್ವಾಗ್ ಹಾಗೂ ಆರತಿ ಒಟ್ಟಿಗೆ ವಾಸಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿ ಜೊತೆಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದ ಅವರು ಇತ್ತೀಚೆಗೆ ಅದನ್ನು ನಿಲ್ಲಿಸಿದ್ದಾರೆ. ಅಲ್ಲದೇ ಕೆಲದಿನಗಳ ಹಿಂದೆ ತಾಯಿ ಮತ್ತು ಮಕ್ಕಳ ಜೊತೆಗಿನ ಚಿತ್ರವನ್ನು ಹಾಗೂ ಕೇರಳಕ್ಕೆ ಭೇಟಿ ನೀಡಿದ್ದಾಗ ತಾವು ಒಬ್ಬರೇ ಇದ್ದ ಚಿತ್ರವನ್ನು ಮಾತ್ರ ಅವರು ಹಂಚಿಕೊಂಡಿದ್ದರು‘ ಎಂದು ವರದಿಯಾಗಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಆರತಿ ಹಾಗೂ ಸೆಹ್ವಾಗ್ ಅವರು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ Unfollow ಮಾಡಿಕೊಂಡಿದ್ದಾರೆ.

1999 ರಲ್ಲಿ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಸೆಹ್ವಾಗ್ ‘ಟೀಂ ಇಂಡಿಯಾ’ದ ಆರಂಭಿಕ ಸ್ಪೋಟಕ ಬ್ಯಾಟ್ಸ್‌ಮನ್ ಆಗಿದ್ದರು. 2013ರಲ್ಲಿ ಅವರು ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

ದೆಹಲಿ ಮೂಲದ ಆರತಿ ಅವರು 21 ನೇ ವಯಸ್ಸಿನಲ್ಲಿ ಸೆಹ್ವಾಗ್ ಅವರನ್ನು ವರಿಸಿದ್ದರು. ನಂತರ ಪತಿಯ ಬೆಂಬಲದಿಂದ ಅವರು ಕೆಲ ಕಂಪನಿಗಳನ್ನು ಆರಂಭಿಸಿ ಉದ್ಯಮಿಯಾಗಿದ್ದರು. 2004ರಲ್ಲಿ ಅರುಣ್ ಜೆಟ್ಲಿ ಅವರ ನಿವಾಸದಲ್ಲಿ ಈ ಇಬ್ಬರ ವಿವಾಹವಾಗಿದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.