ADVERTISEMENT

ವಲ್ಚರ್ಸ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 19:42 IST
Last Updated 3 ಫೆಬ್ರುವರಿ 2020, 19:42 IST
ಕೆಎಸ್‌ಸಿಎ ಗುಂಪು–1, ಡಿವಿಷನ್‌ 1,2,3ರ 19 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ವಲ್ಚರ್ಸ್‌ ಕ್ಲಬ್‌ ತಂಡ (ನಿಂತವರು; ಎಡದಿಂದ) ಅಮೋಘ್‌ ಡೊಕ್ಕಾ, ಕುಶಾಲ್‌ ಗೌಡ, ಭಾರ್ಗವ, ಎಸ್‌.ಎಂ.ಶಮಂತ್‌, ಮರಿಬಸವ, ಸನೀಲ್‌ ನವರ್‌, ನಿಹಾಲ್‌, ಪ್ರಿಯಾಲ್‌ ಸಿಂಗ್‌, ಕೌಶಿಕ್‌, ಆರ್‌.ಸ್ಮರಣ್‌ ಮತ್ತು ಹಿಮಾಂಶು. (ಕುಳಿತವರು; ಎಡದಿಂದ) ರೋಹನ್‌ ಎ.ಪಾಟೀಲ (ನಾಯಕ), ರಾಹುಲ್‌ ಮೆನನ್‌ (ಕೋಚ್‌), ಆರ್‌.ಪ್ರಕಾಶ್‌ (ಮ್ಯಾನೇಜರ್‌) ಮತ್ತು ಜೆ.ಜಿ.ಪ್ರೇಮನಾಥ್‌.

ಬೆಂಗಳೂರು: ಆರ್‌.ಸ್ಮರಣ್‌ (122; 138ಎ, 9ಬೌಂ, 4ಸಿ) ಅವರ ಆಕರ್ಷಕ ಶತಕ ಮತ್ತು ಎಸ್‌.ಎಂ.ಶಮಂತ್‌ (23ಕ್ಕೆ6) ಪರಿಣಾಮಕಾರಿ ಬೌಲಿಂಗ್‌ ಬಲದಿಂದ ವಲ್ಚರ್ಸ್‌ ಕ್ಲಬ್‌ ತಂಡ ಕೆಎಸ್‌ ಸಿಎ ಗುಂಪು–1, ಡಿವಿಷನ್‌ 1,2,3ರ 19 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ.

ಬೆಂಗಳೂರು ಅಕೇಷನಲ್ಸ್‌ ಎದುರಿನ ಫೈನಲ್‌ನಲ್ಲಿ ವಲ್ಚರ್ಸ್‌ ತಂಡ ಇನಿಂಗ್ಸ್‌ ಮುನ್ನಡೆ ಗಳಿಸಿ ಈ ಸಾಧನೆ ಮಾಡಿದೆ.

ಸಂಕ್ಷಿಪ್ತ ಸ್ಕೋರ್‌: ವಲ್ಚರ್ಸ್‌ ಕ್ಲಬ್‌; ಮೊದಲ ಇನಿಂಗ್ಸ್‌: 74.4 ಓವರ್‌ಗಳಲ್ಲಿ 277 (ಆರ್‌.ಸ್ಮರಣ್‌ 122; ಮೊಹ ಮ್ಮದ್‌ ಸಾದಿಕ್‌ 76ಕ್ಕೆ5). ಬೆಂಗಳೂರು ಅಕೇಷನಲ್ಸ್‌: ಮೊದಲ ಇನಿಂಗ್ಸ್‌; 33.5 ಓವರ್‌ಗಳಲ್ಲಿ 85 ( ಎಸ್‌.ಎಂ.ಶಮಂತ್‌ 23ಕ್ಕೆ6) ಮತ್ತು 45 ಓವರ್‌ಗಳಲ್ಲಿ 6 ವಿಕೆಟ್‌ಗೆ 206 .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.