ADVERTISEMENT

ವಸೀಂ, ವಖಾರ್ ಸಲಹೆಗೆ ಅಭಾರಿ: ರಿಯಾಜ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 19:45 IST
Last Updated 7 ಜೂನ್ 2019, 19:45 IST
ವಿಕೆಟ್ ಗಳಿಸಿದಾಗ ಸಂಭ್ರಮಿಸಿದ ವಹಾಬ್ ರಿಯಾಜ್ (ಎಡ) –ರಾಯಿಟರ್ಸ್ ಚಿತ್ರ
ವಿಕೆಟ್ ಗಳಿಸಿದಾಗ ಸಂಭ್ರಮಿಸಿದ ವಹಾಬ್ ರಿಯಾಜ್ (ಎಡ) –ರಾಯಿಟರ್ಸ್ ಚಿತ್ರ   

ಬ್ರಿಸ್ಟಲ್ (ಎಎಫ್‌ಪಿ): ‘ವಸೀಂ ಅಕ್ರಮ್ ಮತ್ತು ವಖಾರ್ ಯೂನಿಸ್ ಅವರ ಸಲಹೆ ಸಿಗದೇ ಇದ್ದಿದ್ದರೆ ಈಗ ಮನೆಯಲ್ಲೇ ಕುಳಿತು ವಿಶ್ವಕಪ್ ಟೂರ್ನಿ ವೀಕ್ಷಿಸುವ ಪರಿಸ್ಥಿತಿಯಾಗುತ್ತಿತ್ತು’ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ವಹಾಬ್ ರಿಯಾಜ್ ಅಭಿಪ್ರಾಯಪಟ್ಟರು.

ಎರಡು ವರ್ಷಗಳ ಹಿಂದೆ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧದ ಪಂದ್ಯದಲ್ಲಿ ರಿಯಾಜ್ 8.4 ಓವರ್‌ಗಳಲ್ಲಿ 89 ರನ್ ನೀಡಿದ್ದರು. ಹೀಗಾಗಿ ಅವರು ಆಯ್ಕೆ ಸಮಿತಿಯ ಕೆಂಗಣ್ಣಿಗೆ ಪಾತ್ರರಾಗಿದ್ದರು. ವಿಶ್ವಕಪ್‌ನಲ್ಲಿ ಆಡುವ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯೂ ಇರಲಿಲ್ಲ. ಎಡಗೈ ವೇಗಿ ಜುನೈದ್ ಖಾನ್ ಫಿಟ್ ಇಲ್ಲದ ಕಾರಣ ಕೊನೆಯಲ್ಲಿ ರಿಯಾಜ್ ಅವರನ್ನು ತಂಡಕ್ಕೆ ಸೇರಿಸಲಾಗಿತ್ತು.

‘ವಖಾರ್ ಮತ್ತು ವಾಸಿಂ ಜೊತೆ ಮಾತನಾಡಿ, ಸಲಹೆ ಪಡೆದ ನಂತರ ನನ್ನ ಕ್ರಿಕೆಟ್ ಜೀವನವೇ ಬದಲಾಯಿತು. ಈಗ ಖುಷಿಯಾಗಿದ್ದೇನೆ. ನಾನು ಸಣ್ಣವನಿದ್ದಾಗ ವಾಸಿಂ ಅವರ ಬೌಲಿಂಗ್ ನೋಡಿ ಸಂಭ್ರಮಿಸುತ್ತಿದ್ದೆ. ಆಗಲೇ ಅವರನ್ನು ಮಾದರಿಯಾಗಿರಿಸಿಕೊಂಡಿದ್ದೆ. ಅವರ ಬೆಂಬಲದಿಂದ ಈಗ ವಿಶ್ವಕಪ್ ಆಡುತ್ತಿದ್ದೇನೆ, ವಿಕೆಟ್‌ಗಳನ್ನು ಪಡೆಯುತ್ತಿದ್ದೇನೆ’ ಎಂದು ರಿಯಾಜ್ ಅಭಿಪ್ರಾಯಪಟ್ಟರು.

ADVERTISEMENT

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರಿಯಾಜ್ 82ಕ್ಕೆ3 ವಿಕೆಟ್ ಉರುಳಿಸಿದ್ದರು. ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.