ADVERTISEMENT

ರೊನಾಲ್ಡೊ ರೀತಿಯಲ್ಲಿ ಕೋಕಾ ಕೋಲಾ ಬಾಟಲಿ ಬದಿಗೆ ಸರಿಸಿದ ವಾರ್ನರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2021, 15:46 IST
Last Updated 29 ಅಕ್ಟೋಬರ್ 2021, 15:46 IST
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್   

ದುಬೈ: ಪೋರ್ಚುಗಲ್‌ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊರೀತಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಕೋಕಾ ಕೋಲಾ ಬಾಟಲಿಯನ್ನು ಬದಿಗೆ ಸರಿಸಿರುವ ಘಟನೆ ನಡೆದಿದೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ಶ್ರೀಲಂಕಾ ವಿರುದ್ಧದ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ವಾರ್ನರ್ ಕೋಕಾ ಕೋಲಾ ಬಾಟಲಿಗಳನ್ನು ಬದಿಗೆ ಸರಿಸಿದರು.

ಸುದ್ದಿಗೋಷ್ಠಿಗೆ ಬಂದ ವಾರ್ನರ್, ಟೇಬಲ್ ಮೇಲೆ ಬಾಟಲಿಗಳನ್ನು ಇರಿಸಿರುವುದನ್ನು ಗಮನಿಸಿ, 'ನಾನಿದನ್ನು ತಗೆಯಬಹುದೇ' ಎಂದು ತಮಾಷೆಗಾಗಿ ಕೇಳಿದ್ದಾರೆ.

'ಇದು ಕ್ರಿಸ್ಟಿಯಾನೋ ರೊನಾಲ್ಡೊಗೆ ಒಳ್ಳೆಯದು ಎಂದಾದರೆ ನನಗೂ ಕೂಡಾ ಒಳ್ಳೆಯದೇ' ಎಂದು ನಗು ಮುಖದಿಂದಲೇ ಹೇಳಿದ್ದಾರೆ.

ಈ ಹಿಂದೆ ಯುರೋ ಕಪ್ ವೇಳೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಕೋಕಾ ಕೋಲಾ ಬಾಟಲಿಗಳನ್ನು ಬದಿಗಿರಿಸಿದ್ದ ರೊನಾಲ್ಡೊ, ನೀರಿನ ಬಾಟಲಿ ಎತ್ತಿಕೊಂಡು ನೀರು ಕುಡಿಯಿರಿ ಆರೋಗ್ಯವಾಗಿರಿ ಎಂದು ಸೂಚನೆ ಕೊಟ್ಟಿದ್ದರು. ಇದರಿಂದ ತಂಪು ಪಾನೀಯದ ಬ್ರ್ಯಾಂಡ್‌ಗೆ ಹೊಡೆತ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.