ADVERTISEMENT

ಪಂದ್ಯಶ್ರೇಷ್ಠ ಪ್ರಶಸ್ತಿ ಅಭಿಮಾನಿಗೆ ಉಡುಗೊರೆ

ಕ್ರಿಕೆಟ್‌ ಪ್ರೇಮಿಗಳ ಹೃದಯ ಗೆದ್ದ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್‌ ವಾರ್ನರ್‌

ಪಿಟಿಐ
Published 14 ಜೂನ್ 2019, 20:00 IST
Last Updated 14 ಜೂನ್ 2019, 20:00 IST
ಡೇವಿಡ್‌ ವಾರ್ನರ್‌
ಡೇವಿಡ್‌ ವಾರ್ನರ್‌   

ಟಾಂಟನ್‌: ತನಗೆ ಬಂದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಯುವ ಅಭಿಮಾನಿಯೊಬ್ಬರಿಗೆ ನೀಡುವ ಮೂಲಕ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಕ್ರಿಕೆಟ್‌ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಜೂನ್‌ 12ರಂದು ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 41 ರನ್‌ಗಳಿಂದ ಜಯ ಸಾಧಿಸಿತ್ತು. ಶತಕ ಬಾರಿಸಿದ್ದ ವಾರ್ನರ್‌ ಪಂದ್ಯಶ್ರೇಷ್ಠ ಗೌರವ ಪಡೆದಿದ್ದರು.

ಪಂದ್ಯದ ಬಳಿಕ ಪೆವಿಲಿಯನ್‌ಗೆ ತೆರಳುತ್ತಿದ್ದ ವಾರ್ನರ್‌ ಅವರನ್ನು ಅಭಿಮಾನಿಗಳು ಮುತ್ತಿದರು. ಆಸ್ಟ್ರೇಲಿಯಾ ಜರ್ಸಿ ಧರಿಸಿದ್ದ ಅಭಿಮಾನಿಯೊಬ್ಬನಿಗೆ ವಾರ್ನರ್‌ ತಮ್ಮ ಪ್ರಶಸ್ತಿಯನ್ನು ಉಡುಗೊರೆಯಾಗಿ ನೀಡಿದರು.

‘ಇದೊಂದು ವಿಸ್ಮಯ. ನಾವು ದೇಶದ ಬಾವುಟಗಳನ್ನು ಹಿಡಿದಿದ್ದೆವು. ಈ ವೇಳೆ ನಮ್ಮತ್ತ ಬಂದ ವಾರ್ನರ್‌ ಪ್ರಶಸ್ತಿಯನ್ನು ನಮ್ಮ ಕೈಗೆ ಇರಿಸಿದರು’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.