ADVERTISEMENT

ಪಿಚ್‌ನಲ್ಲಿ ಪಾಕಿಸ್ತಾನದ ವೇಗಿಗಳ ಓಟ; ಎರಡು ಬಾರಿ ಅಂಪೈರ್‌ಗಳಿಂದ ಎಚ್ಚರಿಕೆ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 12:14 IST
Last Updated 16 ಜೂನ್ 2019, 12:14 IST
   

ಮ್ಯಾಂಚೆಸ್ಟರ್‌: ಭಾರತ–ಪಾಕಿಸ್ತಾನ ಪಂದ್ಯದಲ್ಲಿ ಪಾಕಿಸ್ತಾನದ ಇಬ್ಬರು ವೇಗದ ಬೌಲರ್‌ಗಳು ಅಂಪೈರ್‌ಗಳಿಂದ ಅಧಿಕೃತ ಎಚ್ಚರಿಕೆಗಳನ್ನು ಪಡೆದರು. ಪಿಚ್‌ನ ಡೇಂಜರ್‌ ಏರಿಯಾದಲ್ಲಿ ಓಡಿದ ಕಾರಣಕ್ಕೆ ಮೌಖಿಕ ಎಚ್ಚರಿಕೆ ಪಡೆದರು.

ಉತ್ತಮ ಬೌಲಿಂಗ್‌ ಮೂಲಕ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಲು ಪ್ರಯತ್ನಿಸುತ್ತಿದ್ದ ಮೊಹಮ್ಮದ್‌ ಅಮೀರ್‌, ಬೌಲಿಂಗ್‌ ಮಾಡಿ ಪಿಚ್‌ನ ಡೇಂಜರ್‌ ಏರಿಯಾದಲ್ಲಿ ಓಡಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಂಪೈರ್‌ ಎಚ್ಚರಿಕೆ ನೀಡಿದರು. ಅಮೀರ್‌ ಎರಡನೇ ಓವರ್‌ನ ಮೂರನೇ ಎಸೆತದಲ್ಲಿ ಹಾಗೂ ಅವರ 3ನೇ ಓವರ್‌ನಲ್ಲಿ ಎರಡನೇ ಎಚ್ಚರಿಕೆ ಪಡೆದರು. ಮತ್ತೊಂದು ಎಚ್ಚರಿಕೆ ಪಡೆದರೆ, ಅವರಿಗೆ ಬೌಲಿಂಗ್‌ ಮಾಡುವ ಅವಕಾಶ ತಪ್ಪಲಿದೆ.

ಭಾರತ 5ನೇ ಓವರ್‌ ಆಟ ಪೂರೈಸುವಷ್ಟರಲ್ಲಿ 2 ಬಾರಿ ಎಚ್ಚರಿಕೆ ನೀಡಲಾಗಿತ್ತು. ಇದಾದ ನಂತರ ವೇಗಿವಹಾಬ್‌ ರಿಯಾಜ್‌ ಸಹ ಅಂಥದ್ದೇ ತಪ್ಪು ಮಾಡಿದರು. ಪಿಚ್‌ನ ಮಧ್ಯ ಭಾಗದವರೆಗೂ ಓಡಿದ ವಹಾಬ್‌ಗೆ ಅಂಪೈರ್‌ ಎಚ್ಚರಿಕೆ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.