ADVERTISEMENT

150 ಪಂದ್ಯ, 12 ಸಾವಿರ ರನ್: ರಣಜಿ ಕ್ರಿಕೆಟ್‌ನಲ್ಲಿ ವಾಸೀಂ ಜಾಫರ್ ದಾಖಲೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 13:10 IST
Last Updated 4 ಫೆಬ್ರುವರಿ 2020, 13:10 IST
   

ವಿದರ್ಭ:ವಿದರ್ಭ ತಂಡದ ಆಟಗಾರ ವಾಸೀಂ ಜಾಫರ್‌ರಣಜಿ ಕ್ರಿಕೆಟ್‌ನಲ್ಲಿ 12 ಸಾವಿರ ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾಜನರಾದರು.

ನಾಗ್ಪುರದಲ್ಲಿ ಕೇರಳ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ‍ಪಡೆದ ವಿದರ್ಭ, ತಂಡದ ಮೊತ್ತಕೇವಲ 23 ರನ್‌ಗಳಾಗುವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಕಳೆದುಕೊಂಡಿತು. ಬಳಿಕ ಬಂದ ಜಾಫರ್, ಕನ್ನಡಿಗ ಗಣೇಶ್‌ ಸತೀಶ್‌ ಜೊತೆಗೂಡಿ ತಾಳ್ಮೆಯ ಆಟವಾಡಿದರು.

ಈ ಜೋಡಿ ಮೂರನೇ ವಿಕೆಟ್‌ಗೆ 104 ರನ್‌ ಸೇರಿಸಿತು. ಜಾಫರ್‌ 149 ಎಸೆತಗಳಲ್ಲಿ 57 ರನ್ ಗಳಿಸಿದರು. ಸತೀಶ್‌ 58ರನ್‌ ಕಲೆಹಾಕಿದರು. ಸದ್ಯ ಮೊದಲ ದಿನದಾಟ ಮುಕ್ತಾಯವಾಗಿದ್ದು, ವಿದರ್ಭ ತಂಡ 84 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 239 ರನ್ ಕಲೆಹಾಕಿದೆ.

ADVERTISEMENT

2019–20ರ ರಣಜಿ ಟೂರ್ನಿ ಆರಂಭಕ್ಕೂ ಮುನ್ನ ಜಾಫರ್ ಖಾತೆಯಲ್ಲಿ 11,775 ರನ್‌ಗಳಿದ್ದವು. ರಣಜಿ ಕ್ರಿಕೆಟ್‌ನಲ್ಲಿ 150ಕ್ಕಿಂತ ಹೆಚ್ಚು ಪಂದ್ಯ ಆಡಿದ ಮೊದಲಿಗಎನಿಸಿರುವ ಜಾಫರ್‌ಗೆ ಇದು 156ನೇ ಪಂದ್ಯ. ಅವರ ಖಾತೆಯಲ್ಲಿ ಸದ್ಯ 12,038‬ ರನ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.