ADVERTISEMENT

ಮೊಬೈಲ್ ಬಿಡಿ ಭಾಗದಿಂದ ಕೊಹ್ಲಿ ಕಲಾಕೃತಿ: ಅಭಿಮಾನಿಯ ಕಲಾಕೌಶಲ ಕಂಡು ಬೆರಗಾದ ನಾಯಕ

ಕ್ರಿಕೆಟ್

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 13:57 IST
Last Updated 6 ಜನವರಿ 2020, 13:57 IST
   

ಗುವಾಹಟಿ: ಮೈದಾನದಲ್ಲಿ ವೀರಾವೇಷದ ಆಟವಾಡುವ ವಿರಾಟ್‌ ಕೊಹ್ಲಿ ಕೊಟ್ಯಂತರ ಅಭಿಮಾನಿಗಳ ನೆಚ್ಚಿನ ಕ್ರೀಡಾಪಟು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನರು ಹಿಂಬಾಲಿಸುವ ಕ್ರಿಕೆಟಿಗ ಎಂಬ ಶ್ರೇಯ ಇರುವ ಕೊಹ್ಲಿಯನ್ನು ಹತ್ತಿರದಿಂದ ಕಾಣಲು, ಅವರಿಂದ ಹಸ್ತಾಕ್ಷರ ಪಡೆಯಲು ಅಭಿಮಾನಿಗಳು ಮುಗಿ ಬೀಳುವುದನ್ನು ಕಂಡಿದ್ದೇವೆ. ಮತ್ತೆ ಕೆಲವರು ಸಿಬ್ಬಂದಿ ಕಣ್ತಪ್ಪಿಸಿ ಅಂಗಳಕ್ಕೆ ನುಗ್ಗಿದ ಪ್ರಸಂಗಗಳೂ ನಡೆದಿವೆ.

ಇದೆಲ್ಲದರ ನಡುವೆ ಇಲ್ಲೊಬ್ಬ ಅಭಿಮಾನಿಹಳೆಯ ಮತ್ತು ನಿಷ್ಕ್ರಿಯ ಮೊಬೈಲ್‌ಗಳ ಬಿಡಿ ಭಾಗಗಳನ್ನು ಬಳಸಿ ವಿರಾಟ್‌ ಭಾವಚಿತ್ರವನ್ನು ರಚಿಸಿ ಗಮನ ಸೆಳೆದಿದ್ದಾನೆ.

ಅಭಿಮಾನಿಯ ಕಲಾಕೌಶಲವನ್ನು ಕಂಡು ಬೆರಗಾಗಿರುವ ವಿರಾಟ್‌ ಕೊಹ್ಲಿ ಚಿತ್ರಪಟದ ಮೇಲೆ, ‘ಪ್ರೀತಿಯ ರಾಹುಲ್‌, ಇದೊಂದು ಅಸಾಧಾರಣ ಸೃಷ್ಟಿ. ಚೆನ್ನಾಗಿ ರಚಿಸಿದ್ದೀರಿ. ಶುಭವಾಗಲಿ’ ಎಂದು ಬರೆದು ಸಹಿ ಹಾಕಿದ್ದಾರೆ. ಈ ಸಂದರ್ಭದ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಖಾತೆಯಲ್ಲಿ ಹಾಕಿಕೊಂಡಿದೆ.

ADVERTISEMENT

ಗುವಾಹಟಿ ಮೂಲದಕಲಾವಿದ ರಾಹುಲ್‌ಈ ಕಲಾಕೃತಿಯನ್ನು ಮೂರು ಹಗಲು ಮತ್ತು ಮೂರು ರಾತ್ರಿ ಅವಧಿಯಲ್ಲಿರಚಿಸಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯ ಭಾನುವಾರ ಗುವಾಹಟಿಯಲ್ಲಿ ಆಯೋಜನೆಯಾಗಿತ್ತು. ಆದರೆ ಪಂದ್ಯವು ಒಂದೂ ಎಸೆತ ಕಾಣದೆ ರದ್ದಾಯಿತು. ಪಂದ್ಯಕ್ಕೂ ಮುನ್ನ ಕೊಹ್ಲಿ, ರಾಹಲ್‌ ಅವರನ್ನು ಭೇಟಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.