ನವದೆಹಲಿ: ವೆಸ್ಟ್ ಇಂಡೀಸ್‌ನ ಪ್ರಮುಖ ವೇಗಿ ಶಮರ್ ಜೋಸೆಫ್ ಅವರು ಗಾಯಾಳಾಗಿರುವ ಕಾರಣ ಭಾರತ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಗೆ ಅಲಭ್ಯರಾಗಿದ್ದಾರೆ. ಸರಣಿಯ ಮೊದಲ ಪಂದ್ಯ ಅಹಮದಾಬಾದಿನಲ್ಲಿ ಅಕ್ಟೋಬರ್ 2ರಂದು ಆರಂಭವಾಗಲಿದೆ.
26 ವರ್ಷ ವಯಸ್ಸಿನ ಶಮರ್ ಜೋಸೆಫ್ ಅವರಿಗಾದ ಗಾಯವೇನೆಂಬುದನ್ನು ಕ್ರಿಕೆಟ್ ವೆಸ್ಟ್ ಇಂಡೀಸ್ ನಿರ್ದಿಷ್ಟಪಡಿಸಿಲ್ಲ. ಗಯಾನಾದ ಬೌಲರ್‌ನ ಅಲಭ್ಯತೆ ತಂಡಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ. 11 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ಕೇವಲ 21.66 ಸರಾಸರಿಯಲ್ಲಿ 51 ವಿಕೆಟ್‌ಗಳನ್ನು ಪಡೆದಿದ್ದಾರೆ.
ಶಮರ್ ಬದಲು ಜೊಹಾನ್ ಲೇಯ್ನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಬಾರ್ಬಾಡೋಸ್‌ನ 22 ವರ್ಷ ವಯಸ್ಸಿನ ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಜೊಹಾನ್ ಅವರು ಮೊದಲ ಬಾರಿ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಎಕ್ಸ್‌ನಲ್ಲಿ ತಿಳಿಸಿದೆ.
ಜೊಹಾನ್ ಅವರುಯ 19 ಮೊದಲ ದರ್ಜೆ ಪಂದ್ಯಗಳನ್ನು ಆಡಿದ್ದು 495 ರನ್ ಗಳಿಸಿದ್ದಾರೆ. 66 ವಿಕೆಟ್‌ಗಳನ್ನು 22.28 ಸರಾಸರಿಯಲ್ಲಿ ಪಡೆದಿದ್ದಾರೆ. ನಾಲ್ಕು ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.