ADVERTISEMENT

ವಾಯು ಪ್ರದೇಶ ನಿರ್ಬಂಧ: ತವರಿಗೆ ಮರಳಲು ವೆಸ್ಟ್‌ ಇಂಡೀಸ್‌ ತಂಡಕ್ಕೆ ಅಡ್ಡಿ

ಪಿಟಿಐ
Published 3 ಮಾರ್ಚ್ 2026, 16:24 IST
Last Updated 3 ಮಾರ್ಚ್ 2026, 16:24 IST
<div class="paragraphs"><p> ವೆಸ್ಟ್‌ ಇಂಡೀಸ್‌ ಕ್ರಿಕೆಟ್ ಮಂಡಳಿಯ ಲೋಗೊ</p></div>

ವೆಸ್ಟ್‌ ಇಂಡೀಸ್‌ ಕ್ರಿಕೆಟ್ ಮಂಡಳಿಯ ಲೋಗೊ

   

ಎಕ್ಸ್ ಚಿತ್ರ

ನವದೆಹಲಿ: ಟಿ20 ವಿಶ್ವಕಪ್‌ ಅಭಿಯಾನ ಮುಗಿಸಿರುವ ವೆಸ್ಟ್‌ ಇಂಡೀಸ್‌ ತಂಡಕ್ಕೆ ತವರಿಗೆ ಮರಳಲು ಅಂತರರಾಷ್ಟ್ರೀಯ ವಾಯು ಪ್ರದೇಶ ನಿರ್ಬಂಧದಿಂದ ಸಮಸ್ಯೆಯಾಗಿದೆ. ಹೀಗಾಗಿ ತಂಡ ಭಾರತದಲ್ಲೇ ಉಳಿದಿದೆ.

ADVERTISEMENT

ಅಮೆರಿಕ ಮತ್ತು ಇಸ್ರೇಲ್ ಪಡೆಗಳು, ಇರಾನ್ ಮೇಲೆ ದಾಳಿ ಮಾಡಿದ ನಂತರ ಈ ನಿರ್ಬಂಧ ಶುರುವಾಗಿದೆ.

ಆಟಗಾರರು ಸುರಕ್ಷಿತವಾಗಿ ಮರಳಲು ಅನುವಾಗುವಂತೆ ಐಸಿಸಿ ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿರುವುದಾಗಿ ಕ್ರಿಕೆಟ್‌ ವೆಸ್ಟ್ ಇಂಡೀಸ್ ಹೇಳಿದೆ. ಯದ್ಧದ ಕಾರಣ ಕೊಲ್ಲಿ ಪ್ರದೇಶದಲ್ಲಿ ವಿಮಾನಗಳ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಸದಾ ಬ್ಯುಸಿಯಾಗಿರುವ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು –ನಾಲ್ಕು ದಿನ ಪ್ರಯಾಣಿಕರು ಸಿಲುಕಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.