ADVERTISEMENT

ಮಹಿಳಾ ಕ್ರಿಕೆಟ್‌: ಆಂಧ್ರ ವಿರುದ್ಧ ಕರ್ನಾಟಕಕ್ಕೆ ಸೋಲು

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 18:27 IST
Last Updated 27 ಜನವರಿ 2020, 18:27 IST

ಬೆಂಗಳೂರು: ಬ್ಯಾಟಿಂಗ್‌ ವೈಫಲ್ಯ ಕಂಡ ಕರ್ನಾಟಕ ಮಹಿಳಾ ತಂಡ, ಬಿಸಿಸಿಐ 23 ವರ್ಷದೊಳಗಿನವರ ಏಕದಿನ ಕ್ರಿಕೆಟ್‌ ಟ್ರೋಫಿ ಟೂರ್ನಿಯಲ್ಲಿ ಸೋಮವಾರ ಆಂಧ್ರ ತಂಡಕ್ಕೆ ಐದು ವಿಕೆಟ್‌ಗಳಿಂದ ಸೋತಿತು.

ಆಂಧ್ರ ಪ್ರದೇಶದ ಮೂಲಪಾಡುವಿನ ಚುಕ್ಕಪಾಲಿ ಪಿಚ್ಚಯ್ಯ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ತಂಡಕ್ಕೆ ನಿಕಿ ಪ್ರಸಾದ್‌ (58) ಹಾಗೂ ಶುಭಾ ಎಸ್‌ (26) ಬ್ಯಾಟಿಂಗ್‌ನಲ್ಲಿ ಕೊಡುಗೆ ನೀಡಿದರು. ಆಂಧ್ರ ತಂಡದ ಸಾರಣ್ಯಾ ಗಡ್ವಾಲ್‌ ಮೂರು ವಿಕೆಟ್‌ ಕಿತ್ತರು. 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 185 ರನ್‌ ಗಳಿಸಲಷ್ಟೇ ಕರ್ನಾಟಕಕ್ಕೆ ಸಾಧ್ಯವಾಯಿತು.

ಸಾಧಾರಣ ಗುರಿ ಬೆನ್ನತ್ತಿದ ಆಂಧ್ರ ತಂಡ 45.3 ಓವರ್‌ಗಳಲ್ಲಿ ಜಯದ ಗುರಿ ತಲುಪಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ ಮಹಿಳೆಯರು: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 185 (ಶುಭಾ ಎಸ್‌. 26, ನಿಕಿ ಪ್ರಸಾದ್‌ 58, ಸಿ. ಪ್ರತ್ಯೂಷಾ 21, ಅದಿತಿ ರಾಜೇಶ್‌ ಔಟಾಗದೆ 23; ಸಿ.ಎಚ್‌. ಜಾನ್ಸಿ ಲಕ್ಷ್ಮೀ 38ಕ್ಕೆ2, ಸಾರಣ್ಯಾ ಗಡ್ವಾಲ್‌ 37ಕ್ಕೆ 3). ಆಂಧ್ರ ಮಹಿಳೆಯರು: 45.3 ಓವರ್‌ಗಳಲ್ಲಿ 5 ವಿಕೆಟ್‌ಗೆ 186 (ಎನ್‌.ಅನುಷಾ 59, ಹೆನ್ರಿಯಟ್ಟಾ ಪೆರೇರಾ 47, ಈ ಪದ್ಮಜಾ ಔಟಾಗದೆ 30; ಶುಭಾ ಎಸ್‌ 23ಕ್ಕೆ 2) ಫಲಿತಾಂಶ: ಆಂಧ್ರ ತಂಡಕ್ಕೆ ಐದು ವಿಕೆಟ್‌ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.