ADVERTISEMENT

Women’s ODI World Cup | ದಕ್ಷಿಣ ಆಫ್ರಿಕಾ ಪಾರಮ್ಯ: ಮುಗ್ಗರಿಸಿದ ಪಾಕ್

ವೊಲ್ವಾರ್ಟ್‌ ಬಳಗಕ್ಕೆ 150 ರನ್‌ ಜಯ l ಅಂಕಪಟ್ಟಿಯಲ್ಲಿ ಅಗ್ರಸ್ಥಾನ

ಪಿಟಿಐ
Published 21 ಅಕ್ಟೋಬರ್ 2025, 21:03 IST
Last Updated 21 ಅಕ್ಟೋಬರ್ 2025, 21:03 IST
<div class="paragraphs"><p>ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಟ್‌&nbsp;</p></div>

ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಟ್‌ 

   

ಕೊಲಂಬೊ: ಬಿಟ್ಟು ಬಿಟ್ಟು ಸುರಿದ ಮಳೆಯ ನಡುವೆ ಬ್ಯಾಟಿಂಗ್‌–ಬೌಲಿಂಗ್‌ ಎರಡರಲ್ಲೂ ಮಿಂಚಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ಡಕ್ವರ್ಥ್‌ ಲೂಯಿಸ್‌ ನಿಯಮದ ಆಧಾರದಲ್ಲಿ ಪಾಕಿಸ್ತಾನ ತಂಡವನ್ನು 150 ರನ್‌ಗಳಿಂದ ಮಣಿಸಿದರು. ಅದರೊಂದಿಗೆ, ಅಂಕಪಟ್ಟಿಯಲ್ಲಿ (10 ಪಾಯಿಂಟ್ಸ್‌) ಅಗ್ರಸ್ಥಾನಕ್ಕೇರಿದರು.

ಆರ್‌. ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 40 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 312 ರನ್‌ಗಳ ಬೃಹತ್ ಮೊತ್ತ ಗಳಿಸಿತು. ನಂತರವೂ ಮಳೆ ಸುರಿದ ಕಾರಣ, ಡಿಎಲ್ಎಸ್‌ ನಿಯಮದಡಿ ಪಾಕಿಸ್ತಾನಕ್ಕೆ ಗೆಲುವಿನ ಗುರಿಯನ್ನು 20 ಓವರ್‌ಗಳಲ್ಲಿ 234 ರನ್‌ಗಳಿಗೆ ಪರಿಷ್ಕರಿಸಲಾಯಿತು.

ADVERTISEMENT

ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ಆಲ್‌ರೌಂಡರ್‌ ಮರೈಝಾನ್ ಕಾಪ್ (20ಕ್ಕೆ3) ಅವರ ದಾಳಿ ಎದುರು 7 ವಿಕೆಟ್‌ ನಷ್ಟಕ್ಕೆ 83 ರನ್‌ ಗಳಿಸಲಷ್ಟೇ ಶಕ್ತವಾಯಿತು. ನೀರಸವಾಗಿ ಬ್ಯಾಟಿಂಗ್‌ ಮಾಡಿದ ಫಾತಿಮಾ ಸನಾ ಬಳಗ, ಸುಲಭವಾಗಿ ಸೋಲೊಪ್ಪಿಕೊಂಡಿತು.

ಇದಕ್ಕೆ ಮೊದಲು, ಟಾಸ್ ಗೆದ್ದ ಪಾಕಿಸ್ತಾನ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಮಳೆ ಸುರಿದ ಕಾರಣ ಆಟ ತಡವಾಗಿ ಆರಂಭವಾಯಿತು. ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ಇನಿಂಗ್ಸ್‌ಗೆ 40 ಓವರ್‌ ನಿಗದಿ ಮಾಡಲಾಯಿತು. ಆರಂಭಿಕ ಬ್ಯಾಟರ್, ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ವಾರ್ಟ್ (90; 82ಎ, 4X10, 6X2) ಕೇವಲ ಹತ್ತು ರನ್‌ಗಳಿಂದ ಶತಕ ಕೈತಪ್ಪಿಸಿಕೊಂಡರು. ಲಾರಾ ಹಾಗೂ ಸುನೆ (61; 59ಎ, 4X8, 6X2) ಎರಡನೇ ವಿಕೆಟ್ ಜೊತೆಯಾಟದಲ್ಲಿ 118 ರನ್ ಸೇರಿಸಿದರು.

ಕೊನೆಯಲ್ಲಿ ಮರೈಝಾನ್ ಕಾಪ್ (ಔಟಾಗದೇ 68; 43ಎ, 4X6, 6X3) ಹಾಗೂ ನದೀನ್ (41; 16ಎ, 4X3, 6X4) ಬಿರುಸಿನ ಆಟವಾಡಿ ತಂಡದ ಮೊತ್ತವನ್ನು ತ್ರಿಶತಕದ ಗಡಿ ದಾಟಿಸಿದರು.

ಸಂಕ್ಷಿಪ್ತ ಸ್ಕೋರು:

ದಕ್ಷಿಣ ಆಫ್ರಿಕಾ: 40 ಓವರ್‌ಗಳಲ್ಲಿ 9ಕ್ಕೆ312 (ಲಾರಾ ವೊಲ್ವಾರ್ಟ್ 90, ಸುನೆ ಲೀಸ್ 61, ಮರೈಝನ್ ಕಾಪ್ ಔಟಾಗದೇ 68, ನದೀನ್ ಡಿ ಕರ್ಕ್‌ 41,ಸಾದಿಯಾ ಇಕ್ಬಾಲ್ 63ಕ್ಕೆ3, ನಶ್ರಾ ಸಂಧು 45ಕ್ಕೆ3) ಪಾಕಿಸ್ತಾನ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 83 (ಸಿದ್ರಾ ನವಾಜ್‌ ಔಟಾಗದೇ 22, ನಟಾಲಿಯಾ ಪರ್ವೇಜ್‌ 20, ಮರೈಝಾನ್ ಕಾಪ್ 20ಕ್ಕೆ3, ನೊಂಡುಮಿಸೊ ಶಾಂಗಸೆ 19ಕ್ಕೆ2)

ಪಂದ್ಯದ ಆಟಗಾರ್ತಿ: ಮರೈಝಾನ್ ಕಾಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.