ADVERTISEMENT

ಮಹಿಳಾ ಟಿ20 ಚಾಲೆಂಜ್‌ ಟೂರ್ನಿ: ಸೂಪರ್‌ನೋವಾಸ್‌ ತಂಡಕ್ಕೆ ಪ್ರಶಸ್ತಿ

ಪಿಟಿಐ
Published 28 ಮೇ 2022, 20:24 IST
Last Updated 28 ಮೇ 2022, 20:24 IST
ಪ್ರಶಸ್ತಿ ಗೆದ್ದ ಸೂಪರ್‌ನೋವಾಸ್ ಆಟಗಾರ್ತಿಯರ ಸಂಭ್ರಮ– ಐಪಿಎಲ್‌ ವೆಬ್‌ಸೈಟ್‌ ಚಿತ್ರ
ಪ್ರಶಸ್ತಿ ಗೆದ್ದ ಸೂಪರ್‌ನೋವಾಸ್ ಆಟಗಾರ್ತಿಯರ ಸಂಭ್ರಮ– ಐಪಿಎಲ್‌ ವೆಬ್‌ಸೈಟ್‌ ಚಿತ್ರ   

ಪುಣೆ: ಲೌರಾ ವೊಲ್ವಾರ್ಟ್‌ (ಔಟಾಗದೆ 65) ಅವರ ಹೋರಾಟಕ್ಕೆ ಜಯ ಒಲಿಯಲಿಲ್ಲ. ಸೂಪರ್‌ನೋವಾಸ್‌ ತಂಡವು ವೆಲೋಸಿಟಿಯನ್ನು 4 ರನ್‌ ಗಳಿಂದ ಮಣಿಸಿ ಮಹಿಳಾ ಟಿ20 ಚಾಲೆಂಜ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ಐಪಿಎಲ್ ಅಂಗವಾಗಿ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಂಗಣದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶನಿವಾರ ಟಾಸ್‌ ಗೆದ್ದವೆಲೋಸಿಟಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟ್ ಮಾಡಿದಸೂಪರ್‌ನೋವಾಸ್‌ 20 ಓವರ್‌ಗಳಲ್ಲಿ ಏಳು ವಿಕೆಟ್‌ಗೆ 165 ರನ್‌ ಗಳಿಸಿತು. ಗುರಿ ಬೆನ್ನತ್ತಿದ ವೆಲೋಸಿಟಿ ಎಂಟು ವಿಕೆಟ್‌ ಕಳೆದುಕೊಂಡು 161 ರನ್‌ ಕಲೆ ಹಾಕಿತು. ವೆಲೋಸಿಟಿ ತಂಡದ ವೊಲ್ವಾರ್ಟ್‌ 40 ಎಸೆತಗಳಲ್ಲಿ 5 ಬೌಂಡರಿ, ಮೂರು ಸಿಕ್ಸರ್ ಸಿಡಿಸಿದರು. ಅಲಾನ ಕಿಂಗ್‌ (32ಕ್ಕೆ 3), ಸೋಫಿ ಎಕ್ಲೆಸ್ಟೋನ್‌ (28ಕ್ಕೆ 2) ಮತ್ತು ಡಿಯಾಂಡ್ರ ದೊತಿನ್‌ (28ಕ್ಕೆ 2) ಸೂಪರ್‌ನೋವಾಸ್‌ ಪರ ಬೌಲಿಂಗ್‌ನಲ್ಲಿ ಮಿಂಚಿದರು.

ಅಗ್ರ ಕ್ರಮಾಂಕದ ಪ್ರಿಯಾ ಪೂನಿಯಾ, ಡಿಯಾಂಡ್ರ ದೊತಿನ್ ಮತ್ತು ಹರ್ಮನ್‌ ಪ್ರೀತ್‌ ಕೌರ್‌ ಸೂಪರ್‌ನೋವಾ ಪರ ಅಮೋಘ ಬ್ಯಾಟಿಂಗ್‌ ಮಾಡಿದರು. ಪ್ರಿಯಾ ಮತ್ತು ಡಿಯಾಂಡ್ರ ಮೊದಲ ವಿಕೆಟ್‌ಗೆ ಇಬ್ಬರೂ 73 ರನ್ ಸೇರಿಸಿದರು.ಡಿಯಾಂಡ್ರ 4 ಸಿಕ್ಸರ್‌ ಮತ್ತು 1 ಬೌಂಡರಿಯೊಂದಿಗೆ 44 ಎಸೆತಗಳಲ್ಲಿ 62 ರನ್‌ ಗಳಿಸಿದರೆ, ಹರ್ಮನ್‌ಪ್ರೀತ್‌ ಕೌರ್ 3 ಸಿಕ್ಸರ್ ಸಿಡಿಸಿದರು. 29 ಎಸೆತಗಳಲ್ಲಿ 43 ರನ್‌ ಗಳಿಸಿದರು. ಸೂಪರ್‌ನೋವಾಸ್‌ ತಂಡವು ಮೂರನೇ ಬಾರಿ ಟೂರ್ನಿಯ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.