ಕೊಲಂಬೊ: ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಣ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಪಂದ್ಯ ಶನಿವಾರ ಎಡೆಬಿಡದ ಸುರಿದ ಮಳೆಗೆ ಕೊಚ್ಚಿಹೋಯಿತು. ಮಳೆರಾಯನ ಆರ್ಭಟದಿಂದ ಟಾಸ್ ಕೂಡ ಸಾಧ್ಯವಾಗಲಿಲ್ಲ.
ಎರಡೂ ತಂಡಗಳು ತಲಾ ಒಂದು ಪಾಯಿಂಟ್ ಪಡೆದವು. ಕೊಲಂಬೊದಾದ್ಯಂತ ಮಳೆಯಾಗಿದೆ.
ಆಸ್ಟ್ರೇಲಿಯಾ ವಿಶ್ವಕಪ್‌ನಲ್ಲಿ ಎರಡು ಪಂದ್ಯಗಳಿಂದ ಮೂರು ಪಾಯಿಂಟ್, ಲಂಕಾ ಎರಡು ಪಂದ್ಯಗಳಿಂದ ಒಂದು ಪಾಯಿಂಟ್ ಪಡೆದಿವೆ.
ಆಸ್ಟ್ರೇಲಿಯಾ ಅ. 8ರಂದು ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಶ್ರೀಲಂಕಾ ತಂಡ ಅ. 11ರಂದು ಇಲ್ಲಿಯೇ ಇಂಗ್ಲೆಂಡ್ ತಂಡವನ್ನು ಎದುರಿಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.