ADVERTISEMENT

ಮಹಿಳಾ ವಿಶ್ವಕಪ್‌: ಜುಬಿನ್‌ಗೆ ಗೌರವ ಸಲ್ಲಿಸಲು ನಿರ್ಧಾರ

ಪಿಟಿಐ
Published 28 ಸೆಪ್ಟೆಂಬರ್ 2025, 16:26 IST
Last Updated 28 ಸೆಪ್ಟೆಂಬರ್ 2025, 16:26 IST
   

ಗುವಾಹಟಿ: ದುರ್ಗಾಪೂಜೆ ಸಡಗರದ ವೇಳೆಯೇ ಬಂದಿರುವ ಮಹಿಳಾ ವಿಶ್ವ ಕಪ್‌ ಟೂರ್ನಿ ಇಲ್ಲಿ ಉದ್ಘಾಟನೆಯಾಗುತ್ತಿರುವುದು ಈ ಭಾಗದ ಜನರಲ್ಲಿ ಸಂಭ್ರಮದ ವಾತಾವರಣಕ್ಕೆ ಕಾರಣವಾಗುತಿತ್ತು. ಆದರೆ ಈ ಬಾರಿಯ ವಾತಾವರಣ ಭಿನ್ನವಾಗಿದೆ.

ಜನಪ್ರಿಯ ಗಾಯಕ ಮತ್ತು ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ಐಕನ್ ಆಗಿರುವ ಜುಬಿನ್‌ ಗಾರ್ಗ್ (52) ಅವರ ದುರಂತ ಸಾವಿನ ಶೋಕದಿಂದ ಅಸ್ಸಾಂನ ನಗರ, ಹಳ್ಳಿಗಳು ಇನ್ನೂ ಸಂಪೂರ್ಣ ಹೊರಬಂದಿಲ್ಲ. ‘ಜುಬಿನ್‌ದಾ’ ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸೆ. 19ರಂದು ಮೃತಪಟ್ಟ ಅವರು 40 ಭಾಷೆಗಳಲ್ಲಿ 38,000 ಹಾಡುಗಳನ್ನು ಹಾಡಿದ್ದಾರೆ.

ಅಸ್ಸಾಂ ಕ್ರಿಕೆಟ್‌ ಸಂಸ್ಥೆಯು ಈ ಗಾಯಕನಿಗೆ ಗೌರವ ಸಲ್ಲಿಸಲು ವಿಶ್ವಕಪ್‌ನ ಉದ್ಘಾಟನಾ ಸಮಾರಂಭವನ್ನು ಪುನರ್‌ವಿನ್ಯಾಸಗೊಳಿಸಿದೆ. ಬೇರಾವುದೇ ಸಾಂಸ್ಕೃತಿಕ ಸಂಭ್ರಮಗಳಿರುವುದಿಲ್ಲ. ಜನರ ಭಾವನೆ ಗಮನಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ತಿಳಿಸಿದರು.

ADVERTISEMENT

40 ನಿಮಿಷಗಳ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ಇದು ಜುಬಿನ್ ಅವರಿಗೆ ಸಮರ್ಪಿತವಾಗಿದೆ. ಅಂಗರಾಗ್ ‘ಪಾಪನ್’ ಮಹಾಂತ ಕಾರ್ಯಕ್ರಮ ಪ್ರಸ್ತುತ ಪಡಿಸಲಿದ್ದಾರೆ. ಬಾಲಿವುಡ್‌ ಗಾಯಕಿ ಶ್ರೇಯಾ ಘೋಷಾಲ್ ಅವರು ಜುಬಿನ್ ಅವರಿಗೆ ಸಂಬಂಧಿಸಿ 13 ನಿಮಿಷಗಳ ಕಾರ್ಯಕ್ರಮ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.