ADVERTISEMENT

ಬಾಬರ್‌–ಹ್ಯಾರಿಸ್‌ ಉತ್ತಮ ಬ್ಯಾಟಿಂಗ್‌: ದ.ಆಫ್ರಿಕಾ ಗೆಲುವಿಗೆ 309 ರನ್‌ ಗುರಿ

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 13:44 IST
Last Updated 23 ಜೂನ್ 2019, 13:44 IST
   

ಲಾರ್ಡ್ಸ್‌, ಲಂಡನ್: ಭಾನುವಾರ ದಕ್ಷಿಣ ಆಫ್ರಿಕಾ ಎದುರು ಟಾಸ್‌ ಗೆದ್ದ ಪಾಕಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ತಾಳ್ಮೆಯಪ್ರದರ್ಶನ ತೋರಿತು.

ಪಾಕಿಸ್ತಾನ 50 ಓವರ್‌ಗಳಲ್ಲಿ 7ವಿಕೆಟ್‌ನಷ್ಟಕ್ಕೆ 308ರನ್‌ ಗಳಿಸಿದೆ. ಕ್ಷಣಕ್ಷಣದ ಸ್ಕೋರ್‌:https://bit.ly/2X0FfKP

ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಇಮಾನ್‌ ಉಲ್‌ ಹಕ್‌ ಮತ್ತು ಫಕ್ರ್‌ ಜಮಾನ್‌ ಬಿರುಸಿನ ಆಟ ಆಡುವ ಮೂಲಕತಂಡದ ರನ್‌ ಗಳಿಕೆಗೆ ಉತ್ತಮ ಬುನಾದಿ ಹಾಕಿದರು.

ADVERTISEMENT

ದಕ್ಷಿಣ ಆಫ್ರಿಕಾ ಪರ: ಲುಂಗಿ ಗಿಡಿ 3 , ಇಮ್ರಾನ್‌ ತಾಹೀರ್‌ 2, ಏಡನ್‌ ಮರ್ಕರಮ್‌ ಹಾಗೂಆ್ಯಂಡಿಲೆ ಪಿಶುವಾಯೊ ತಲಾ ಒಂದು ವಿಕೆಟ್‌ ಕಬಳಿಸಿದರು.

ಬಾಬರ್‌ ಆಜಂ(69), ಹ್ಯಾರಿಸ್‌ ಸೊಹೈಲ್‌ (89) ಉತ್ತಮ ಜೊತೆಯಾಟವಾಡಿದರು.

ಫಕ್ರ್‌ ಜಮಾನ್‌ ಪಂದ್ಯದ ಮೊದಲ ಸಿಕ್ಸರ್‌ದಾಖಲಿಸಿದರು. ಇಬ್ಬರ ಜತೆಯಾಟದಲ್ಲಿ 11ಬೌಂಡರಿ, 1 ಸಿಕ್ಸರ್‌ ಸಹಿತ 81 ರನ್‌ ಸೇರ್ಪಡೆಯಾಯಿತು.ಆರಂಭದಲ್ಲಿಯೇ ವಿಕೆಟ್‌ ಕಬಳಿಸಲುಕಗಿಸೊ ರಬಾಡ, ಲುಂಗಿ ಗಿಡಿ ಹಾಗೂ ಕ್ರಿಸ್‌ ಮಾರಿಸ್‌ ನಡೆಸಿದ ಪ್ರಯತ್ನ ಫಲ ನೀಡಲಿಲ್ಲ. ಮಾರಿಸ್‌ ಎಸೆತದಲ್ಲಿ ಜಮಾನ್‌ ನೀಡಿದ ಕ್ಯಾಚ್‌ನ್ನು ಇಮ್ರಾನ್‌ ತಾಹಿರ್‌ ಹಿಡಿದರು. ಆದರೆ, ಔಟ್‌ ಅಲ್ಲ ಎಂದು ನಿರ್ಣಯಿಸಲಾಯಿತು. ಬೌಲಿಂಗ್‌ಗೆ ಬಂದ ತಾಹಿರ್‌, ತನ್ನ ಮೊದಲ ಓವರ್‌ನ ಐದನೇ ಎಸೆತದಲ್ಲಿ ಫಕ್ರ್‌ ಜಮಾನ್‌(44)ವಿಕೆಟ್‌ ಕಬಳಿಸಿದರು.

ಭಾರತದ ಎದುರಿನ ಪಂದ್ಯದಲ್ಲಿ ಸೋತ ಪಾಕಿಸ್ತಾನ ತಂಡ ಅಭಿಮಾನಿಗಳಿಂದ ಸಾಕಷ್ಟು ಟೀಕೆಗೆ ಒಳಗಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸುವ ಒತ್ತಡದಲ್ಲಿದೆ. ಸರ್ಫರಾಜ್ ಅಹಮದ್ ನಾಯಕತ್ವದ ಪಾಕ್ ತಂಡಕ್ಕೆ ಇದು ಆರನೇ ಪಂದ್ಯ. ಕಳೆದ ಐದು ಪಂದ್ಯಗಳಲ್ಲಿ ತಂಡಕ್ಕೆ ದಕ್ಕಿರುವುದು ಒಂದೇ ಜಯ. ಇನ್ನೊಂದು ಪಂದ್ಯ ಮಳೆಗೆ ಕೊಚ್ಚಿಹೋಗಿತ್ತು. ಆದ್ದರಿಂದ ಮೂರು ಪಂದ್ಯಗಳಲ್ಲಿ ಸೋತಿತ್ತು. ಸೆಮಿಫೈನಲ್‌ ತಲುಪಲು ಇಂದಿನ ಪಂದ್ಯವೂ ಸೇರಿದಂತೆ ಎಲ್ಲ ನಾಲ್ಕು ಪಂದ್ಯಗಳನ್ನೂ ಗೆಲ್ಲಬೇಕು.

ದಕ್ಷಿಣ ಆಫ್ರಿಕಾ ತಂಡಕ್ಕೆ ಸೆಮಿಫೈನಲ್ ತಲುಪುವ ಹಾದಿ ಮುಚ್ಚಿದೆ. ತಂಡವು ಇದುವರೆಗೆ ಆಡಿರುವ ಆರು ಪಂದ್ಯಗಳಿಂದ ಕೇವಲ ಮೂರು ಪಾಯಿಂಟ್ ಗಳಿಸಿದೆ. ಇದರಿಂದಾಗಿ ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದರೂ ನಾಲ್ಕರ ಘಟ್ಟ ತಲುಪುವುದು ಅಸಾಧ್ಯದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.