ADVERTISEMENT

ಕೆರೀಬಿಯನ್ನರ ಕಾಡಿದ ಇಂಗ್ಲಿಷ್‌ ಬೌಲರ್‌ಗಳು; 212 ರನ್‌ ಗಳಿಸಿದ ವಿಂಡೀಸ್‌

ವಿಶ್ವಕಪ್‌ ಕ್ರಿಕೆಟ್‌

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 13:45 IST
Last Updated 14 ಜೂನ್ 2019, 13:45 IST
   

ಸೌತಾಂಪ್ಟನ್: ಇಲ್ಲಿನರೋಸ್ ಬೌಲ್ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡಇಂಗ್ಲೆಂಡ್‌ಕೆರೀಬಿಯನ್‌ ಆಟಗಾರರನ್ನು ಕಾಡಿದರು.ಕ್ರಿಸ್‌ ವೋಕ್ಸ್‌ ಆರಂಭದಲ್ಲಿಯೇ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಿಗೆಆಘಾತ ನೀಡಿದರು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ನಿಕೊಲಸ್‌ ಪೂರನ್‌ ಆಸರೆಯಾದರು.

ಬಹುಬೇಗ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದವೆಸ್ಟ್‌ ಇಂಡೀಸ್‌ ತಂಡಕ್ಕೆ ಶಿಮ್ರೊನ್‌ ಹೆಟ್ಮೆಯರ್‌(39) ಮತ್ತು ನಿಕೊಲಸ್‌ ಪೂರನ್‌ ನೆರವಾದರು. ತಂಡ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ಇವರ ಜತೆಯಾಟ ತಡೆಯಿತು. ಜಾಯ್‌ ರೂಟ್‌ ಬೌಲಿಂಗ್‌ನಲ್ಲಿ ಹೆಟ್ಮೆಯರ್‌ ಕ್ಯಾಚ್‌ ನೀಡಿದರು. 63 ರನ್‌ ಗಳಿಸಿದ್ದ ಪೂರನ್‌ ಜೋಫ್ರಾ ಆರ್ಚರ್‌ ದಾಳಿಗೆ ಬಲಿಯಾದರು. ಮೂರು ವಿಕೆಟ್‌ ಕಬಳಿಸಿದ ಆರ್ಚರ್‌ ವಿಂಡೀಸ್‌ ತಂಡ ಸವಾಲಿನ ಮೊತ್ತ ಗಳಿಸುವುದಕ್ಕೆ ತಡೆಯಾದರು.

ವೆಸ್ಟ್ ಇಂಡೀಸ್‌ 44.4ಓವರ್‌ಗಳಲ್ಲಿ ಸರ್ವ ಪತನ ಕಂಡು212ರನ್‌ ಗಳಿಸಿತು.

ADVERTISEMENT

ಕ್ಷಣಕ್ಷಣದ ಸ್ಕೋರ್‌:https://bit.ly/2ZqxavY

ಹೆಟ್ಮೆಯರ್‌ ನಂತರ ಕಣಕ್ಕಿಳಿದ ನಾಯಕ ಜೇಸನ್‌ ಹೋಲ್ಡರ್‌ ಕೇವಲ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಬಿರುಸಿನ ಆಟ ಆಡಿದ ಆ್ಯಂಡ್ರೆ ರಸೆಲ್‌ 16 ಎಸೆತಗಳಲ್ಲಿ 21 ರನ್‌ ಗಳಿಸಿದರು.ಪೂರನ್‌ ವಿಕೆಟ್‌ ಒಪ್ಪಿಸಿದ ಹಿಂದೆಯೇ ಆರ್ಚರ್‌ ಎಸೆತದಲ್ಲಿ ಶೆಲ್ಡನ್‌ ಕಾಟ್ರೆಲ್‌(0) ಎಲ್‌ಬಿಡಬ್ಯು ಆಗಿ ಹೊರನಡೆದರು. ಭರವಸೆ ಮೂಡಿಸಿದ ಕಾರ್ಲೋಸ್‌ ಬ್ರಾಥ್‌ವೈಟ್‌(14) ಸಹ ಆರ್ಚರ್‌ ಎಸೆತದಲ್ಲಿ ಆಟ ಮುಗಿಸಿದರು.

ಅಂತಿಮವಾಗಿ ಮಾರ್ಕ್ ವುಡ್‌.ಶಾನನ್‌ ಗ್ಯಾಬ್ರಿಯಲ್‌(0) ವಿಕೆಟ್‌ ಪಡೆಯುವಮೂಲಕ 212ರನ್‌ ಗಳಿಗೆ ವೆಸ್ಟ್‌ ಇಂಡೀಸ್ ಸರ್ವ ಪತನ ಕಂಡಿತು.ಇಂಗ್ಲೆಂಡ್‌ ಪರ ಮಾರ್ಕ್‌ ವುಡ್‌ ಮತ್ತು ಆರ್ಚರ್‌ ತಲಾ 3 ವಿಕೆಟ್‌;ಜೋ ರೂಟ್‌ 2 ಹಾಗೂ ಕ್ರಿಸ್‌ ವೋಕ್ಸ್‌ ಮತ್ತು ಲಿಯಾಮ್‌ ಫ್ಲಂಕೆಟ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

ಆರಂಭಿಕರಾಗಿ ಕಣಕ್ಕಿಳಿದ ಕ್ರಿಸ್‌ ಗೇಲ್‌ ಮತ್ತು ಎವಿನ್‌ ಲೂಯಿಸ್‌ ಲಯ ಕಂಡುಕೊಳ್ಳುವ ಮುನ್ನವೇ ಕ್ರಿಸ್‌ ವೋಕ್ಸ್ ದಾಳಿಗೆ ಲೂಯಿಸ್‌ ವಿಕೆಟ್‌ ಒಪ್ಪಿಸಿದರು. ಜೋಫ್ರಾ ಆರ್ಚರ್‌ ಸಹ ರನ್‌ ಹರಿಯದಂತೆ ಕಡಿವಾಣ ಹಾಕಿದ್ದಾರೆ. ಬೌನ್ಸರ್‌ಗಳ ಮೂಲಕ ಕ್ರಿಸ್‌ ಗೇಲ್‌ ವಿಕೆಟ್‌ ಪಡೆಯಲುಪ್ರತಿ ಎಸೆತದಲ್ಲಿಯೂ ಕಂಡು ಬಂತು.

ಆರನೇ ಓವರ್‌ನಲ್ಲಿ ಗೇಲ್‌ ಹೊಡೆತವನ್ನು ಕ್ಯಾಚ್‌ ಆಗಿ ಪರಿವರ್ತಿಸಿಕೊಳ್ಳಲು ವಿಫಲರಾದ ಇಂಗ್ಲೆಂಡ್‌ ತಂಡಕ್ಕೆ ಈಗ ಗೇಲ್‌ ಅಪಾಯಕಾರಿಯಾಗಿ ಪರಿಣಿಸುವ ಸಾಧ್ಯತೆ ಹೆಚ್ಚಿತ್ತು. ಆದರೆ, 12ನೇ ಓವರ್‌ನಲ್ಲಿ ಲಿಯಾಮ್‌ ಫ್ಲಂಕೆಟ್‌ ಎಸೆತದಲ್ಲಿ ಗೇಲ್‌(36) ಕ್ಯಾಚ್‌ ನೀಡಿ ಆಟ ಮುಗಿಸಿದರು. ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದ ಶಾಯ್‌ ಹೋಪ್‌(11) ಮಾರ್ಕ್‌ ವುಡ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಆದರು.

ಇಂಗ್ಲೆಂಡ್‌ ತಂಡದ ಬಿರುಸಿನ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಜೇಸನ್‌ ರಾಯ್‌ ಗಾಯದ ಸಮಸ್ಯೆಯಿಂದಾಗಿ ಫೀಲ್ಡಿಂಗ್‌ನಿಂದ ಹೊರಗುಳಿದಿದ್ದಾರೆ.

ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ಮತ್ತು ಜೇಸನ್ ಹೋಲ್ಡರ್ ಮುಂದಾಳತ್ವದ ವೆಸ್ಟ್ ಇಂಡೀಸ್ ತಂಡಗಳು ತಲಾ ಮೂರು ಪಂದ್ಯಗಳನ್ನು ಆಡಿವೆ. ಆತಿಥೇಯ ತಂಡವು ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ಎದುರು ದೊಡ್ಡ ಅಂತರದ ಗೆಲುವು ಸಾಧಿಸಿತ್ತು. ಆದರೆ, ಪಾಕಿಸ್ತಾನ ತಂಡದ ಎದುರು ಸೋತಿತ್ತು. ವಿಂಡೀಸ್ ತಂಡವು ಪಾಕ್ ವಿರುದ್ಧ ಗೆದ್ದಿತ್ತು. ಆಸ್ಟ್ರೇಲಿಯಾ ಎದುರು ಪರಾಭವಗೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಮಾರ್ಗನ್ ಬಳಗದಲ್ಲಿರುವ ಜೇಸನ್ ರಾಯ್, ಜೋ ರೂಟ್ ಮತ್ತು ಜೋಸ್ ಬಟ್ಲರ್ ಶತಕ ಬಾರಿಸಿದ್ದಾರೆ. ಆದರೆ ಸ್ಪೋಟಕ ಬ್ಯಾಟ್ಸ್‌ಮನ್‌ಗಳು ಇರುವ ವಿಂಡೀಸ್ ತಂಡದಿಂದ ಇನ್ನೂ ಒಂದು ಶತಕ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.