ADVERTISEMENT

ಮೊದಲ ಪಂದ್ಯದ ಎರಡನೇ ಎಸೆತದಲ್ಲೇ ವಿಕೆಟ್ ತೆಗೆದ ಇಮ್ರಾನ್ ತಾಹೀರ್ ವಯಸ್ಸು 40!

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 14:48 IST
Last Updated 13 ಜೂನ್ 2019, 14:48 IST
   

ದಿ ಓವಲ್ (ಲಂಡನ್): ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡು ಪ್ಲೆಸಿ, ಇಮ್ರಾನ್ ತಾಹೀರ್‌ಗೆ ಮೊದಲು ಓವರ್ ಬೌಲಿಂಗ್ ಅವಕಾಶ ನೀಡಿದಾಗ ಅಲ್ಲಿ ನಡೆದದ್ದು ಐತಿಹಾಸಿಕ ಕ್ಷಣ.ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಒಬ್ಬ ಸ್ಪಿನ್ ಬೌಲರ್‌‌ಗೆ ಮೊದಲ ಬೌಲಿಂಗ್ ಅವಕಾಶ ನೀಡಿದ್ದು!.

ವಿಶ್ವಕಪ್‌ನ ಮೊದಲ ಓವರ್‌ನಲ್ಲಿ ಬೌಲಿಂಗ್ ಮಾಡಿದ ಮೊದಲ ಸ್ಪಿನ್ನರ್ ಎಂಬ ಹೆಗ್ಗಳಿಕೆ ಇಮ್ರಾನ್ ತಾಹೀರ್ ಪಾಲಾಗಿದೆ.

ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಂದ್ಯದ ಆರಂಭದಲ್ಲಿ ಲೆಗ್ ಸ್ಪಿನ್ನರ್‌ಗೆ ಈ ಜವಾಬ್ದಾರಿ ನೀಡಿ ರಣತಂತ್ರ ಹಣೆದ ಡು ಪ್ಲೆಸಿ ನಿರ್ಧಾರ ಸರಿಯಾಗಿಯೇ ಇತ್ತು. ಎರಡನೇ ಎಸೆತದಲ್ಲಿಯೇ ತಾಹೀರ್, ಜಾನಿ ಬೇರ್‌ಸ್ಟೋ ಅವರ ವಿಕೆಟ್ ಗಳಿಸಿದಾಗ ಇಂಗ್ಲೆಂಡ್ ತಂಡದ ಸ್ಕೋರ್ ಒಂದು ರನ್, ಜಾನಿ ಬೇರ್‌ಸ್ಟೋ ಸೊನ್ನೆ ಸುತ್ತಿದರು.

ADVERTISEMENT

ಹೀಗೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಓವರ್‌ನಲ್ಲಿ ವಿಕೆಟ್ ಗಳಿಸಿದ ಎರಡನೇ ಕ್ರಿಕೆಟಿಗ ಇಮ್ರಾನ್ ತಾಹೀರ್, ಪ್ರಸ್ತುತ ಪಂದ್ಯದಲ್ಲಿ ತಾಹೀರ್ 2 ವಿಕೆಟ್ ಗಳಿಸಿದ್ದಾರೆ.

1992ರ ವಿಶ್ವಕಪ್‍ನಲ್ಲಿ ನ್ಯೂಜಿಲೆಂಡ್‌ನ ಜಾನ್ ರೈಟ್ ಅವರ ವಿಕೆಟ್ ಕಬಳಿಸುವ ಮೂಲಕ ಆಸ್ಟ್ರೇಲಿಯಾದ ಕ್ರೇಗ್ಮ್ಯಾಕ್‌ಡೆರ್ಮಟ್ ಮೊದಲ ಓವರ್‌ನಲ್ಲಿ ವಿಕೆಟ್ ಗಳಿಸಿದ ಮೊದಲ ಕ್ರಿಕೆಟಿಗ ಆಗಿದ್ದಾರೆ.

ಮೊದಲ ಪಂದ್ಯದಲ್ಲಿಯೇ ಗಮನ ಸೆಳೆದ ಇಮ್ರಾನ್‌ ತಾಹೀರ್ ವಯಸ್ಸು 40 ವರ್ಷ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.