ಮುಂಬೈ ಇಂಡಿಯನ್ಸ್ ತಂಡವು ಎರಡನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿ ಜಯಿಸಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಸತತ ಮೂರನೇ ಬಾರಿ ರನ್ನರ್ಸ್ ಅಪ್ ಆಯಿತು.
(ಪಿಟಿಐ ಚಿತ್ರ)
ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಶನಿವಾರ (ಮಾರ್ಚ್ 15) ನಡೆದ ರೋಚಕ ಫೈನಲ್‌ನಲ್ಲಿ ಮುಂಬೈ ತಂಡವು 8 ರನ್‌ಗಳಿಂದ ಡೆಲ್ಲಿ ತಂಡವನ್ನು ಸೋಲಿಸಿತು.
150 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 141 ರನ್ ಗಳಿಸಲಷ್ಟೇ ಸಾಧ್ಯವಾಯಿತು.
ಮುಂಬೈಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕ ಗಳಿಸಿದರು.
ಮುಂಬೈ ತಂಡವು 2023ರಲ್ಲಿ ನಡೆದಿದ್ದ ಚೊಚ್ಚಲ ಡಬ್ಲ್ಯುಪಿಎಲ್ ಪ್ರಶಸ್ತಿ ಜಯಿಸಿತ್ತು.
ಮುಂಬೈ ತಂಡದ ಆಟಗಾರ್ತಿಯರ ವಿಜಯೋತ್ಸವ
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾಲಕಿ ನೀತಾ ಅಂಬಾನಿ ಸಂಭ್ರಮ
ಮುಂಬೈ ಫೀಲ್ಡರ್ ಅಮೆಲಿಯಾ ಕೆರ್ ಅದ್ಭುತ ಕ್ಷೇತ್ರರಕ್ಷಣೆ
ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಮುಂಬೈ ತಂಡದ ಪ್ರಾಬಲ್ಯ
ಮಹಿಳಾ ಪ್ರೀಮಿಯರ್ ಲೀಗ್ ಭಾರಿ ಜನಪ್ರಿಯತೆ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.