ADVERTISEMENT

WPL: ನೀಲಿ ಸೀರೆಯುಟ್ಟು ರಾಯಲ್ ಎನ್‌ಫೀಲ್ಡ್ ಬೈಕ್‌ ಏರಿ ಬಂದ ಇಂಗ್ಲೆಂಡ್ ಆಟಗಾರ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಜನವರಿ 2026, 6:13 IST
Last Updated 5 ಜನವರಿ 2026, 6:13 IST
   

ಮುಂಬೈ: ಇಂಗ್ಲೆಂಡ್‌ ಕ್ರಿಕೆಟ್‌ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್ ಅವರು ಮಹಾರಾಷ್ಟ್ರದ ನವಾರಿ ಸಂಪ್ರದಾಯದಂತೆ ಸೀರೆಯುಟ್ಟು, ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಮುಂಬೈ ಇಂಡಿಯನ್ಸ್‌ ಕ್ಯಾಂಪ್‌ಗೆ ಆಗಮಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

2026ನೇ ಸಾಲಿನ ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯೂಪಿಎಲ್‌) ಟೂರ್ನಿ ಆರಂಭಕ್ಕೂ ಮುನ್ನ ಎಲ್ಲ ಆಟಗಾರ್ತಿಯರು ತಮ್ಮ ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ.

ಆಲ್‌ರೌಂಡರ್ ನ್ಯಾಟ್ ಸಿವರ್-ಬ್ರಂಟ್ ಅವರು ಡಬ್ಲ್ಯೂಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಪರವಾಗಿ ಆಡುತ್ತಿದ್ದಾರೆ. ಎಂಐ ತಂಡವು ಟೂರ್ನಿಯ ಆರಂಭಕ್ಕೂ ಮುನ್ನ ಆಟಗಾರ್ತಿಯರು ತಂಡದ ಕ್ಯಾಂಪ್‌ಗೆ ಆಗಮಿಸುವ ವಿಶೇಷ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದೆ. ಇತ್ತೀಚೆಗೆ ನ್ಯಾಟ್ ಸಿವರ್-ಬ್ರಂಟ್ ಅವರ ವಿಡಿಯೊ ಪೋಸ್ಟ್‌ ಮಾಡಿದೆ.

ADVERTISEMENT

ನೀಲಿ ಬಣ್ಣದ ನೀರೆಯುಟ್ಟು, ನೀಲಿ ಬಣ್ಣದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಆಗಮಿಸುವ ನ್ಯಾಟ್ ಸಿವರ್-ಬ್ರಂಟ್. ನಾನು ಆಗಮಿಸಿದ್ದೇನೆ ಎಂದು ಹೇಳುತ್ತಾರೆ. ಮುಂಬೈ ಇಂಡಿಯನ್ಸ್‌ ತಂಡದ ಜರ್ಸಿ ಕೂಡ ನೀಲಿ ಬಣ್ಣವಾಗಿದೆ.

ನ್ಯಾಟ್ ಸಿವರ್-ಬ್ರಂಟ್ ವಿಡಿಯೊಗೆ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ಧುರಂದರ್‌ ಸಿನಿಮಾದ ಹಿನ್ನಲೆ ಸಂಗೀತವನ್ನು ಹಾಕಲಾಗಿದೆ. ಪೋಸ್ಟ್‌ಗೆ ‘ಧುರಂದರ್‌ ವಾಲಿ ಎಂಟ್ರಿ. ಎಫ್‌.ಟಿ. ಅಪ್ಲಿ ಎನ್‌ಎಸ್‌ಬಿ!’ ಎಂದು ಅಡಿ ಬರಹ ನೀಡಲಾಗಿದೆ.

ಜ. 9ರಿಂದ ಡಬ್ಲ್ಯೂಪಿಎಲ್‌ ಟೂರ್ನಿ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.