ADVERTISEMENT

WPL: ಮುಂಬೈ ವಿರುದ್ಧ ಟಾಸ್‌ ಗೆದ್ದ ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್‌ ಆಯ್ಕೆ

ಏಜೆನ್ಸೀಸ್
Published 15 ಮಾರ್ಚ್ 2024, 13:56 IST
Last Updated 15 ಮಾರ್ಚ್ 2024, 13:56 IST
<div class="paragraphs"><p>ಆರ್‌ಸಿಬಿ </p></div>

ಆರ್‌ಸಿಬಿ

   

ಚಿತ್ರ ಕೃಪೆ: ಎಕ್ಸ್‌ @wplt20

ನವದೆಹಲಿ: ಮಹಿಳಾ ಪ್ರೀಮಿಯರ್‌ ಲೀಗ್‌ನ ಪ್ಲೇ ಆಫ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್‌ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬ್ಯಾಟಿಂಗ್‌ ಆಯ್ದುಕೊಂಡಿದೆ.

ADVERTISEMENT

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು ಆರ್‌ಸಿಬಿಗೆ ಇದು ಮೊದಲ ಪ್ಲೇ ಆಫ್‌ ಪಂದ್ಯವಾಗಿದೆ.

ಐದು ತಂಡಗಳ ಲೀಗ್‌ನಲ್ಲಿ ಹರ್ಮನ್‌ಪ್ರೀತ್‌ ಕೌರ್‌ ನೇತೃತ್ವದ ಮುಂಬೈ ಎರಡನೇ ಮತ್ತು ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ಮೂರನೇ ಸ್ಥಾನ ಪಡೆದು ಪ್ಲೇ ಆಫ್‌ಗೆ ಅರ್ಹತೆ ಪಡೆದಿದ್ದವು. ಈ ಪಂದ್ಯದ ವಿಜೇತ ತಂಡವು, ಲೀಗ್‌ನಲ್ಲಿ ಮೊದಲ ಸ್ಥಾನ ಪಡೆದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಭಾನುವಾರ ನಡೆಯುವ ಫೈನಲ್‌ನಲ್ಲಿ ಎದುರಿಸಲಿದೆ.

ಗಾಯಗೊಂಡು ಒಂದು ಪಂದ್ಯ ಕಳೆದುಕೊಂಡಿದ್ದ ಯಷ್ಟಿಕಾ ಭಾಟಿಯಾ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮರಳಲಿದ್ದಾರೆ.

ಈ ಹಿಂದಿನ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸ್ಮೃತಿ ಮಂದಾನ, ರಿಚಾ ಘೋಷ್‌ ಮತ್ತು ಎಲ್ಲಿಸ್ ಪೆರಿ ಅವರಿಂದ ಆರ್‌ಸಿಬಿ ಆತ್ಮವಿಶ್ವಾಸದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.