ADVERTISEMENT

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ | ಮೂರು ಫೈನಲ್‌ ಸೂಕ್ತ: ಕೋಚ್ ರವಿಶಾಸ್ತ್ರಿ ಸಲಹೆ

ಪಿಟಿಐ
Published 2 ಜೂನ್ 2021, 15:39 IST
Last Updated 2 ಜೂನ್ 2021, 15:39 IST
ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ
ವಿರಾಟ್ ಕೊಹ್ಲಿ ಮತ್ತು ರವಿಶಾಸ್ತ್ರಿ   

ಮುಂಬೈ: ಭವಿಷ್ಯದಲ್ಲಿ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ಗಳಲ್ಲಿ ‘ಬೆಸ್ಟ್ ಆಫ್ ತ್ರೀ‘ ಫೈನಲ್ ಮಾದರಿಯನ್ನು ಅನುಸರಿಸಬೇಕು ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ಜೂನ್ 18ರಿಂದ ಸೌತಾಂಪ್ಟನ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ಬಳಗವನ್ನು ಎದುರಿಸಲಿದೆ. ಬುಧವಾರ ಇಂಗ್ಲೆಂಡ್‌ಗೆ ಪ್ರಯಾಣ ಆರಂಭಿಸುವ ಮುನ್ನ ರವಿಶಾಸ್ತ್ರಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಟೆಸ್ಟ್ ಚಾಂಪಿಯನ್‌ಷಿಪ್‌ ಮಾದರಿಯು ದೀರ್ಘ ಕಾಲ ತನ್ನ ವರ್ಚಸ್ಸು ಬೆಳೆಸಿಕೊಳ್ಳಲು ಪ್ರಯೋಗಗಳು ಅಗತ್ಯ. ಅದರಲ್ಲಿ ಪ್ರಮುಖವಾಗಿ ಫೈನಲ್ ಗೆ ಮೂರು ಪಂದ್ಯಗಳು ನಡೆಯಬೇಕು. ಅದರಲ್ಲಿ ಹೆಚ್ಚು ಜಯ ಸಾಧಿಸುವವರು ವಿಜೇತರಾಗಬೇಕು. ಇದರೊಂದಿಗೆ ಒಂದು ಟೂರ್ನಿಯನ್ನು ಎರಡೂವರೆ ವರ್ಷಗಳ ಅವಧಿಗೆ ವಿಸ್ತರಿಸಬಹುದು‘ ಎಂದು ಹೇಳಿದರು.

ADVERTISEMENT

‘ಆದರೆ ಈ ರೀತಿಯ ಪ್ರಯೋಗ ಮಾಡಬೇಕಾದರೆ, ಈಗಾಗಲೇ ಸಿದ್ಧವಾಗಿರುವ ವೇಳಾಪಟ್ಟಿಯ ಚಟುವಟಿಕೆಗಳು ಮುಗಿಯಬೇಕು. ಅದಾದ ನಂತರ ಬೆಸ್ಟ್ ಆಫ್‌ ತ್ರಿ ಯೋಚಿಸಬಹುದು‘ ಎಂದೂ ಹೇಳಿದರು.

‘ಇದೇ ಮೊದಲ ಬಾರಿ ಡಬ್ಲ್ಯುಟಿಸಿ ಫೈನಲ್ ನಡೆಯುತ್ತಿದೆ. ಇದೊಂದು ಅಭೂತಪೂರ್ವ ಮತ್ತು ದೊಡ್ಡ ಪಂದ್ಯ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದರಲ್ಲಿ ಆಡುತ್ತಿರುವ ಎರಡೂ ತಂಡಗಳಿಗೆ ಹೊಸ ಅನುಭವ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.