ADVERTISEMENT

ಐಪಿಎಲ್‌ನಲ್ಲಿ ಯಜುವೇಂದ್ರ ಚಾಹಲ್ 150 ವಿಕೆಟ್ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2022, 11:28 IST
Last Updated 11 ಏಪ್ರಿಲ್ 2022, 11:28 IST
ಸಂಜು ಸ್ಯಾಮ್ಸನ್ ಹಾಗೂ ಯಜುವೇಂದ್ರ ಚಾಹಲ್
ಸಂಜು ಸ್ಯಾಮ್ಸನ್ ಹಾಗೂ ಯಜುವೇಂದ್ರ ಚಾಹಲ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 150 ವಿಕೆಟ್‌ ಕಬಳಿಸಿದ ಆರನೇ ಬೌಲರ್ ಎಂಬ ಖ್ಯಾತಿಗೆ ಯಜುವೇಂದ್ರ ಚಾಹಲ್ ಪಾತ್ರರಾಗಿದ್ದಾರೆ.

ಐಪಿಎಲ್ 15ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಚಾಹಲ್, ಭಾನುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.

ಅಲ್ಲದೆ ಐಪಿಎಲ್‌ನಲ್ಲಿ ವೇಗದ 150 ವಿಕೆಟ್ ಗಳಿಸಿದ ಭಾರತೀಯ ಬೌಲರ್ ಎನಿಸಿದ್ದಾರೆ. 118ನೇ ಪಂದ್ಯದಲ್ಲಿ ಚಾಹಲ್ 150 ವಿಕೆಟ್ ಸಾಧನೆ ಮಾಡಿದ್ದಾರೆ. ಲಸಿತ್ ಮಾಲಿಂಗ 105 ಹಾಗೂ ಅಮಿತ್ ಮಿಶ್ರಾ 140ನೇ ಪಂದ್ಯದಲ್ಲಿ 150 ವಿಕೆಟ್ ಗಳಿಸಿದ್ದರು.

ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್ ಸರದಾರರ ಪಟ್ಟಿ:
ಡ್ವೇನ್ ಬ್ರಾವೊ: 173
ಲಸಿತ್ ಮಾಲಿಂಗ: 170
ಅಮಿತ್ ಮಿಶ್ರಾ: 166
ಪಿಯೂಷ್ ಚಾವ್ಲಾ: 157
ಯಜುವೇಂದ್ರ ಚಾಹಲ್: 150
ಹರಭಜನ್ ಸಿಂಗ್: 150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.