ADVERTISEMENT

ಮದ್ಯ ಕಂಪೆನಿ ಪ್ರಾಯೋಜಿತ ಪ್ರಶಸ್ತಿ ನಿರಾಕರಿಸಿದ ಈಜಿಪ್ಟ್ ಫುಟ್‍ಬಾಲ್ ತಂಡದ ಗೋಲ್ ಕೀಪರ್

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:50 IST
Last Updated 18 ಜೂನ್ 2018, 13:50 IST
ಮುಹಮ್ಮದ್ ಎಲ್ಶೆನಾವಿ
ಮುಹಮ್ಮದ್ ಎಲ್ಶೆನಾವಿ   

ಮಾಸ್ಕೊ: 21ನೇ ವಿಶ್ವಕಪ್ ಫುಟ್‍ಬಾಲ್ ಟೂರ್ನಿಯಲ್ಲಿ ಉರುಗ್ವೇ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಾಗಿ ಆಯ್ಕೆಯಾದ ಈಜಿಪ್ಟ್ ಗೋಲ್ ಕೀಪರ್ ಮುಹಮ್ಮದ್ ಎಲ್ಶೆನಾವಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಅಮೆರಿಕನ್ ಬಿಯರ್ ಕಂಪೆನಿಯಾದ ಬಡ್‍ವೈಜರ್ ಪ್ರಾಯೋಜಿತ ಪ್ರಶಸ್ತಿ ಇದಾಗಿದ್ದರಿಂದ ತಮ್ಮ ತಂಡದ ಯಾವೊಬ್ಬ ಸದಸ್ಯನೂ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಈಜಿಪ್ಟ್ ಟೀಂ ನಿರ್ದೇಶಕ ಇಹಾಬ್ ಲೆಹತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT