ADVERTISEMENT

ಫುಟ್‌ಬಾಲ್: ಭಾರತಕ್ಕೆ ಸೋಲು

ಪಿಟಿಐ
Published 23 ಮಾರ್ಚ್ 2019, 4:59 IST
Last Updated 23 ಮಾರ್ಚ್ 2019, 4:59 IST
   

ತಾಷ್ಕಂಟ್‌, ಉಜ್ಬೆಕಿಸ್ತಾನ: ಉಜ್ಬೆಕಿಸ್ತಾನಕ್ಕೆ ಮೂರು ಗೋಲುಗಳಿಂದ ಮಣಿದ ಭಾರತ ತಂಡ ಎಎಫ್‌ಸಿ 23 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಆರಂಭದಲ್ಲೇ ನಿರಾಸೆ ಅನುಭವಿಸಿತು.

ಶುಕ್ರವಾರ ಇಲ್ಲಿ ನಡೆದ ಪಂದ್ಯದಲ್ಲಿ ಉಜ್ಬೆಕಿಸ್ತಾನದ ನಾಯಕ ಇಸ್ಲೊಮೊಜೊವ್ ಕೊಬಿಲೊವ್‌ ಮೊದಲಾರ್ಧದಲ್ಲಿ ಲಭಿಸಿದ ಪೆನಾಲ್ಟಿ ಅವಕಾಶದಲ್ಲಿ ಗೋಲು ಗಳಿಸಿದರು. ಬೊಬಿರ್‌ ಅಬ್ದಿಕ್ಸೊಲಿಕೊವ್‌ ಎರಡು ಗೋಲು ಗಳಿಸಿ ಮಿಂಚಿದರು.

ಭಾರತ ಸತತವಾಗಿ ಗೋಲು ಗಳಿಸುವ ಅವಕಾಶವನ್ನು ಸೃಷ್ಟಿಮಾಡಿತು. ಅನ್ವರ್‌ ನೀಡಿದ ಪಾಸ್‌ನಲ್ಲಿ ರಾಹುಲ್ ಕೆಪಿ ಅವರು ಗೋಲು ಗಳಿಸಲು ಪ್ರಯತ್ನಿಸಿದರು. ಆದರೆ ಚೆಂಡು ಗುರಿ ಸೇರಲಿಲ್ಲ.

ADVERTISEMENT

ಉಜ್ಬೆಕಿಸ್ತಾನ ಆರಂಭದಲ್ಲೇ ಅಮೋಘ ಆಟದ ಮೂಲಕ ಮಿಂಚಿತು. ಹೀಗಾಗಿ ತಂಡ ಗೆಲುವಿನ ಹಾದಿಯಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.