ADVERTISEMENT

ಕೋವಿಡ್‌–19 ಸೋಂಕಿನ ಭೀತಿ: ಭಾರತ–ಕತಾರ್‌ ಪಂದ್ಯ ಮುಂದಕ್ಕೆ

ಪಿಟಿಐ
Published 7 ಮಾರ್ಚ್ 2020, 19:45 IST
Last Updated 7 ಮಾರ್ಚ್ 2020, 19:45 IST
ಕುಶಾಲ್‌ ದಾಸ್‌
ಕುಶಾಲ್‌ ದಾಸ್‌   

ನವದೆಹಲಿ: ಕೋವಿಡ್‌–19 ವೈರಸ್‌ ಸೋಂಕಿನ ಭೀತಿಯಿಂದಾಗಿ ಭಾರತ ಮತ್ತು ಕತಾರ್‌ ನಡುವಣ 2022ರ ಫಿಫಾ ವಿಶ್ವಕಪ್‌ ಅರ್ಹತಾ ಫುಟ್‌ಬಾಲ್‌ ಪಂದ್ಯವನ್ನು ಮುಂದೂಡಲಾಗಿದೆ.

ಉಭಯ ತಂಡಗಳ ನಡುವಣ ಈ ಹಣಾಹಣಿ ಇದೇ ತಿಂಗಳ 26ರಂದು ಭುವನೇಶ್ವರದಲ್ಲಿ ನಡೆಯಬೇಕಿತ್ತು.

‘ಕೋವಿಡ್‌ ಭೀತಿಯಿಂದಾಗಿ ಇದೇ ತಿಂಗಳ 26ರಂದು ನಿಗದಿಯಾಗಿದ್ದ ಪಂದ್ಯವನ್ನು ಈ ವರ್ಷದ ಅಂತ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮಂಗಳವಾರ (ಮಾರ್ಚ್‌ 10) ನವದೆಹಲಿಯಲ್ಲಿ ಎಎಫ್‌ಸಿ ಮತ್ತು ಎಐಎಫ್‌ಎಫ್‌ ಅಧಿಕಾರಿಗಳ ಸಭೆ ನಿಗದಿಯಾಗಿದೆ. ಇದರಲ್ಲಿ ಚರ್ಚಿಸಿ ಪಂದ್ಯದ ಸ್ಥಳ ಮತ್ತು ದಿನಾಂಕವನ್ನು ಶೀಘ್ರವೇ ಪ್ರಕಟಿಸುತ್ತೇವೆ. ಜೂನ್‌ 9ರಂದು ಕೋಲ್ಕತ್ತದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಅಫ್ಗಾನಿಸ್ತಾನ ನಡುವಣ ಪಂದ್ಯವನ್ನೂ ಮುಂದಕ್ಕೆ ಹಾಕಲು ತೀರ್ಮಾನಿಸಿದ್ದೇವೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಮಹಾ ಕಾರ್ಯದರ್ಶಿ ಕುಶಾಲ್‌ ದಾಸ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.