ADVERTISEMENT

ಬೆಂಗಳೂರು ಇಂಡಿಪೆಂಡೆಂಟ್ಸ್ ಜಯಭೇರಿ

ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 14:21 IST
Last Updated 13 ಜನವರಿ 2021, 14:21 IST
ಎಡಿಇ ಎಫ್‌ಸಿ ತಂಡದ ರಾಯಲ್ ವಾಸ್ಕರ್‌ (ಎಡ) ಹಾಗೂ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ತಂಡದ ಮೊಹಮ್ಮದ್ ಶಾಹೀದ್ ಅಫ್ರಿದ್‌ ಎಂ. ಅವರು ಚೆಂಡಿನ ಮೇಲೆ ಹತೋಟಿ ಸಾಧಿಸಲು ಯತ್ನಿಸಿದರು– ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌
ಎಡಿಇ ಎಫ್‌ಸಿ ತಂಡದ ರಾಯಲ್ ವಾಸ್ಕರ್‌ (ಎಡ) ಹಾಗೂ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ತಂಡದ ಮೊಹಮ್ಮದ್ ಶಾಹೀದ್ ಅಫ್ರಿದ್‌ ಎಂ. ಅವರು ಚೆಂಡಿನ ಮೇಲೆ ಹತೋಟಿ ಸಾಧಿಸಲು ಯತ್ನಿಸಿದರು– ಪ್ರಜಾವಾಣಿ ಚಿತ್ರ/ಬಿ.ಎಚ್‌.ಶಿವಕುಮಾರ್‌   

ಬೆಂಗಳೂರು: ಅದ್ಭುತ ಆಟವಾಡಿದ ಬೆಂಗಳೂರು ಇಂಡಿಪೆಂಡೆಂಟ್ಸ್ ಎಫ್‌ಸಿ ತಂಡವು ಬಿಡಿಎಫ್ಎ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಲೀಗ್ ಟೂರ್ನಿಯಲ್ಲಿ ಬುಧವಾರ 3–1ರಿಂದ ಎಡಿಇ ಎಫ್‌ಸಿ ತಂಡವನ್ನು ಮಣಿಸಿತು.

ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಸೆಣಸಾಟದಲ್ಲಿ ವಿಜೇತ ತಂಡದ ತಿಜೊ ಜಾಬ್‌ (45ನೇ ನಿಮಿಷ), ವಿನೋದ್‌ (49ನೇ ನಿ.) ಹಾಗೂ ಮಣಿವಣ್ಣನ್‌ (54ನೇ ನಿ. ಪೆನಾಲ್ಟಿ) ಗೋಲು ದಾಖಲಿಸಿದರು. ಎಡಿಇ ಎಫ್‌ಸಿ ತಂಡದ ಪರ ಕ್ಲಿಂಟನ್‌ (9ನೇ ನಿ.) ಕಾಲ್ಚಳಕ ತೋರಿದರು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ಎಫ್‌ಸಿ 2–0ಯಿಂದ ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ತಂಡವನ್ನು ಸೋಲಿಸಿತು. ವಿಜೇತ ತಂಡದ ಎರಡೂ ಗೋಲುಗಳನ್ನು ಗೋಪಿ (35 ಹಾಗೂ 41ನೇ ನಿ.) ದಾಖಲಿಸಿದರು. ಗೋಪಿ ಅವರು ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಆಡಿದ ಆಟಗಾರ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.