ADVERTISEMENT

ಫುಟ್‌ಬಾಲ್‌ ಲೀಗ್‌ | ಬಿಟಿಎಂ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2024, 21:30 IST
Last Updated 27 ಫೆಬ್ರುವರಿ 2024, 21:30 IST
 ಫುಟ್‌ಬಾಲ್‌
ಫುಟ್‌ಬಾಲ್‌   

ಬೆಂಗಳೂರು: ಬಿಟಿಎಂ ಎಫ್‌ಸಿ ತಂಡವು ಬಿಡಿಎಫ್‌ಎ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಪಂದ್ಯದಲ್ಲಿ 2–1ರಿಂದ ಬೆಂಗಳೂರು ಗನ್ನರ್ಸ್‌ ತಂಡವನ್ನು ಮಣಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬಿಟಿಎಂ ಪರವಾಗಿ ರೋಹನ್‌ ಜೊನಾಥನ್ (15ನೇ ನಿಮಿಷ) ಮತ್ತು ಮೊಹಮ್ಮದ್‌ ಖಲೀಲ್‌ (40ನೇ ನಿ) ಗೋಲು ಗಳಿಸಿದರು. ಗನ್ನರ್ಸ್‌ ಪರವಾಗಿ ನವೀನ್‌ ಶ್ರೀಕುಮಾರ್‌ (18ನೇ ನಿ) ಏಕೈಕ ಗೋಲು ತಂದಿತ್ತರು.

ಇತರ ಪಂದ್ಯದಲ್ಲಿ ರೂಟ್ಸ್‌ ಎಫ್‌ಎಸ್‌ ತಂಡವು 3–1ರಿಂದ ಎಡಿಇ ಎಫ್‌ಸಿ ತಂಡದ ವಿರುದ್ಧ; ಪರಿಕ್ರಮ ಎಫ್‌ಸಿ ತಂಡವು 1–0ಯಿಂದ ಬ್ಲಿಟ್ಜ್‌ ಎಫ್‌ಸಿ ವಿರುದ್ಧ ಗೆಲುವು ದಾಖಲಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.