ADVERTISEMENT

ಫುಟ್‌ಬಾಲ್‌: ಎಎಸ್‌ಸಿ ಎಫ್‌ಸಿಗೆ ಜಯ

ಬಿಡಿಎಫ್‌ಎ ಲೀಗ್‌ ಫುಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 15:41 IST
Last Updated 9 ನವೆಂಬರ್ 2019, 15:41 IST
ಎಎಸ್‌ಸಿ ಎಫ್‌ಸಿ ತಂಡದ ತ್ಯಾಗರಾಜನ್‌ ಹಾಗೂ ಬೆಂಗಳೂರು ಇಂಡಿಪೆಂಡೆನ್ಸ್ ಎಫ್‌ಸಿ ತಂಡದ ಅಂಥೋನಿ ಜಯಪ್ರಕಾಶಂ ಚೆಂಡಿಗಾಗಿ ಪೈಪೋಟಿ ನಡೆಸಿದರು–ಪ್ರಜಾವಾಣಿ ಚಿತ್ರ–ಎಸ್‌.ಕೆ.ದಿನೇಶ್‌
ಎಎಸ್‌ಸಿ ಎಫ್‌ಸಿ ತಂಡದ ತ್ಯಾಗರಾಜನ್‌ ಹಾಗೂ ಬೆಂಗಳೂರು ಇಂಡಿಪೆಂಡೆನ್ಸ್ ಎಫ್‌ಸಿ ತಂಡದ ಅಂಥೋನಿ ಜಯಪ್ರಕಾಶಂ ಚೆಂಡಿಗಾಗಿ ಪೈಪೋಟಿ ನಡೆಸಿದರು–ಪ್ರಜಾವಾಣಿ ಚಿತ್ರ–ಎಸ್‌.ಕೆ.ದಿನೇಶ್‌   

ಬೆಂಗಳೂರು: ಮಿಂಚಿನ ಆಟವಾಡಿದ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಇಂಡಿಪೆಂಡೆನ್ಸ್ ತಂಡವನ್ನು 3–0ಯಿಂದ ಮಣಿಸಿತು.

ಶನಿವಾರ ನಡೆದ ಹಣಾಹಣಿಯಲ್ಲಿ ವಿಜೇತ ತಂಡದ ಪರ ಮುತ್ತುರಾಮನ್‌ ತ್ಯಾಗರಾಜನ್‌ (25ನೇ ನಿಮಿಷ), ಚಾನಂಬಮ್‌ ಜೊತಿನ್‌ಸಿಂಗ್‌ (66ನೇ ನಿಮಿಷ) ಗೋಲು ದಾಖಲಿಸಿದರು. ಮತ್ತೊಂದು ಗೋಲ ಅನ್ನು ಬೆಂಗಳೂರು ಇಂಡಿಪೆಂಡೆನ್ಸ್ ತಂಡದ ಅಂಥೋನಿ ಜಯಪ್ರಕಾಶಂ (34ನೇ ನಿಮಿಷ) ಅವರು ಕಾಣಿಕೆ (ಸ್ವಯಂ ಗೋಲು) ನೀಡಿದರು.

ಭಾನುವಾರ ಟೂರ್ನಿಗೆ ವಿರಾಮದ ದಿನ. ಸೋಮವಾರ ನಡೆಯುವ ಸೂಪರ್‌ ಡಿವಿಷನ್‌ ಪಂದ್ಯಗಳಲ್ಲಿ ಬೆಂಗಳೂರು ಈಗಲ್ಸ್ ಎಫ್‌ಸಿ– ಎಫ್‌ಸಿ ಬೆಂಗಳೂರು ಯುನೈಟೆಡ್‌ ಮತ್ತು ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ–ಸೌತ್‌ ಯುನೈಟೆಡ್‌ ಎಫ್‌ಸಿ ಮುಖಾಮುಖಿಯಾಗಲಿವೆ.‘ಎ’ ಡಿವಿಷನ್‌ ಲೀಗ್‌ನಲ್ಲಿ ಎಫ್‌ಸಿ ಡೆಕ್ಕನ್‌– ಬೆಂಗಳೂರು ಗನ್ನರ್ಸ್ ಮತ್ತು ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ ಎಫ್‌ಸಿ– ಪರಿಕ್ರಮ ಎಫ್‌ಸಿ ನಡುವೆ ಹಣಾಹಣಿ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.