ADVERTISEMENT

ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ : ಡ್ರಾ ಮಾಡಿಕೊಂಡ ಬೆಂಗಳೂರು ಯುನೈಟೆಡ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 17:34 IST
Last Updated 14 ನವೆಂಬರ್ 2018, 17:34 IST
ಬೆಂಗಳೂರು ಯುನೈಟೆಡ್ ತಂಡದ ಅಮೋಸ್ (ಕೆಂಪು ಪೋಷಾಕು) ಮತ್ತು ಜವಾಹರ್ ಯೂನಿಯನ್ ತಂಡದ ಲಸಿಸಿ ಚೆಂಡಿಗಾಗಿ ಪೈಪೋಟಿ ನಡೆಸಿದ ಕ್ಷಣ
ಬೆಂಗಳೂರು ಯುನೈಟೆಡ್ ತಂಡದ ಅಮೋಸ್ (ಕೆಂಪು ಪೋಷಾಕು) ಮತ್ತು ಜವಾಹರ್ ಯೂನಿಯನ್ ತಂಡದ ಲಸಿಸಿ ಚೆಂಡಿಗಾಗಿ ಪೈಪೋಟಿ ನಡೆಸಿದ ಕ್ಷಣ   

ಬೆಂಗಳೂರು: ಡೇವಿಡ್‌ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಯುನೈಟೆಡ್‌ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಯುನೈಟೆಡ್‌ ಮತ್ತು ಜವಾಹರ ಯೂನಿಯನ್‌ ನಡುವಣ ಹೋರಾಟ 1–1 ಗೋಲುಗಳಿಂದ ಸಮಬಲವಾಯಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಜವಾಹರ ತಂಡ ಎಂಟನೇ ನಿಮಿಷದಲ್ಲಿ ಖಾತೆ ತೆರೆಯಿತು. ಜೋಶುವಾ ಗೋಲು ಬಾರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು. ಆದರೆ 22 ನೇ ನಿಮಿಷದಲ್ಲಿ ಡೇವಿಡ್‌ ಚೆಂಡನ್ನು ಗುರಿ ಮುಟ್ಟಿಸಿದ್ದರಿಂದ ಬೆಂಗಳೂರು ಯುನೈಟೆಡ್‌ 1–1ರಲ್ಲಿ ಸಮಬಲ ಸಾಧಿಸಿತು. ನಂತರದ ಅವಧಿಯಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಆದರೆ ಯಾರಿಗೂ ಗೆಲುವಿನ ಗೋಲು ದಾಖಲಿಸಲು ಆಗಲಿಲ್ಲ.

ADVERTISEMENT

ಪೋಸ್ಟಲ್‌ ಎಫ್‌ಸಿ ಮತ್ತು ಆರ್‌.ಎಸ್‌.ಸ್ಪೋರ್ಟ್ಸ್‌ ತಂಡಗಳ ನಡುವಣ ‘ಎ’ ಡಿವಿಷನ್‌ ಲೀಗ್‌ನ ಪಂದ್ಯ ಕೂಡಾ 1–1 ಗೋಲುಗಳಿಂದ ಡ್ರಾ ಆಯಿತು.

ಆರ್‌.ಎಸ್‌.ಸ್ಪೋರ್ಟ್ಸ್‌ ತಂಡದ ಉದಯ್‌ಕುಮಾರ್‌ 26ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು. 43ನೇ ನಿಮಿಷದಲ್ಲಿ ಪೋಸ್ಟಲ್‌ ತಂಡದ ಪ್ರಶಾಂತ್ ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.