ADVERTISEMENT

ಬೆಂಗಳೂರು ಎಫ್‌ಸಿಗೆ ಮಾರ್ಕೊ ಪೆಜ್ಜಾಯ್‌ವೊಲಿ ಕೋಚ್‌

ಪಿಟಿಐ
Published 12 ಫೆಬ್ರುವರಿ 2021, 13:07 IST
Last Updated 12 ಫೆಬ್ರುವರಿ 2021, 13:07 IST
ಮಾರ್ಕೊ ಪೆಜ್ಜಾಯ್‌ವೊಲಿ
ಮಾರ್ಕೊ ಪೆಜ್ಜಾಯ್‌ವೊಲಿ   

ಮಡಗಾಂವ್‌: ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಬೆಂಗಳೂರು ಎಫ್‌ಸಿ (ಬಿಎಎಫ್‌ಸಿ) ತಂಡವು ಇಟಲಿಯ ಮಾರ್ಕೊ ಪೆಜ್ಜಾಯ್‌ವೊಲಿ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿದೆ. ಸಾಮರ್ಥ್ಯ ಆಧರಿಸಿ ಮೂರು ವರ್ಷಗಳ ಅವಧಿಗೆ ಅವರನ್ನು ನೇಮಿಸಿಕೊಳ್ಳಲು ತಂಡ ನಿರ್ಧರಿಸಿದೆ.

ಸದ್ಯ ನಡೆಯುತ್ತಿರುವ ಐಎಸ್‌ಎಲ್‌ ಟೂರ್ನಿಯು ಮುಗಿದ ಬಳಿಕ ಮಾರ್ಕೊ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಜರ್ಮನ್ ಸಂಜಾತ ಮಾರ್ಕೊ ಎಎಎಫ್‌ಸಿ ಕಪ್ ಟೂರ್ನಿಯ ಪ್ರಿಲಿಮನರಿ ಹಂತದಲ್ಲಿ ಬಿಎಫ್‌ಸಿ ತಂಡಕ್ಕೆ ತರಬೇತಿ ಆರಂಭಿಸಲಿದ್ದಾರೆ. 2023–24ರ ಋತುವಿಗೆ ಅವರ ಒಪ್ಪಂದದ ಅವಧಿ ಮುಗಿಯಲಿದೆ.

52 ವರ್ಷದ ಮಾರ್ಕೊ ಇತ್ತೀಚೆಗೆ, ಬಂಡೆಸ್‌ಲಿಗಾದಲ್ಲಿ ಆಡುವ ಐಂಟ್‌ರ‍್ಯಾಕ್ಟ್ ಫ್ರಾಂಕ್‌ಪರ್ಟ್‌ ಕ್ಲಬ್‌ನ ತಾಂತ್ರಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು.

ADVERTISEMENT

ತಂಡವು ಕಳಪೆ ಸಾಮರ್ಥ್ಯ ತೋರಿದ ಕಾರಣ ತಂಡದ ಕೋಚ್ ಆಗಿದ್ದ ಕಾರ್ಲಸ್‌ ಕ್ವದ್ರತ್‌ ಅವರನ್ನುಬಿಎಫ್‌ಸಿ ಇತ್ತೀಚೆಗೆ ವಜಾ ಮಾಡಿತ್ತು. ನೌಶಾದ್‌ ಮೂಸಾ ಅವರು ಹಂಗಾಮಿ ತರಬೇತುದಾರ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಐಎಸ್‌ಎಲ್ ಟೂರ್ನಿಯ ಮಾಜಿ ಚಾಂಪಿಯನ್ ಆಗಿರುವ ಬಿಎಫ್‌ಸಿ ಸದ್ಯ ಪ್ಲೇ ಆಫ್ ಹಂತ ಪ್ರವೇಶಿಸಲು ಹರಸಾಹಸಪಡಬೇಕಿದೆ. ಟೂರ್ನಿಯಲ್ಲಿ ಪಾಯಿಂಟ್ಸ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಆ ತಂಡದ ಬಳಿ ಸದ್ಯ 19 ಪಾಯಿಂಟ್‌ಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.