ADVERTISEMENT

ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌: ರಿಯಲ್‌ ಬೆಂಗಳೂರು ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 23:38 IST
Last Updated 27 ಸೆಪ್ಟೆಂಬರ್ 2025, 23:38 IST
ಎಫ್‌ಸಿ ರಿಯಲ್‌ ಬೆಂಗಳೂರು ತಂಡದ ಚಂದಂ ಭೀಮಸೇನ್‌ ಸಿಂಗ್‌ (ಬಲ) ಹಾಗೂ ಎಚ್‌ಎಎಲ್‌ ಎಫ್‌ಸಿ ತಂಡದ ಸಹಯ್‌ ಆ್ಯಬಿಸನ್‌ ಅವರು ಚೆಂಡಿಗಾಗಿ ಸೆಣಸಿದರು  ಚಿತ್ರ: ಪುಷ್ಕರ್‌ ವಿ.
ಎಫ್‌ಸಿ ರಿಯಲ್‌ ಬೆಂಗಳೂರು ತಂಡದ ಚಂದಂ ಭೀಮಸೇನ್‌ ಸಿಂಗ್‌ (ಬಲ) ಹಾಗೂ ಎಚ್‌ಎಎಲ್‌ ಎಫ್‌ಸಿ ತಂಡದ ಸಹಯ್‌ ಆ್ಯಬಿಸನ್‌ ಅವರು ಚೆಂಡಿಗಾಗಿ ಸೆಣಸಿದರು  ಚಿತ್ರ: ಪುಷ್ಕರ್‌ ವಿ.   

ಬೆಂಗಳೂರು: ಅಂತಿಮ ಕ್ಷಣದಲ್ಲಿ ಸಯ್ಯದ್‌ ಅಹಮದ್‌ (85ನೇ ನಿ.) ಅವರು ಗಳಿಸಿದ ಗೋಲಿನ ನೆರವಿನಿಂದ ಎಫ್‌ಸಿ ರಿಯಲ್‌ ಬೆಂಗಳೂರು ತಂಡವು ಕೆಎಸ್‌ಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ‍ಪಂದ್ಯದಲ್ಲಿ 1–0ಯಿಂದ ಎಚ್‌ಎಎಲ್‌ ಫುಟ್‌ಬಾಲ್‌ ಕ್ಲಬ್‌ ತಂಡವನ್ನು ಸೋಲಿಸಿತು.

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡವು 2–0ಯಿಂದ ರೂಟ್ಸ್‌ ಎಫ್‌ಸಿ ತಂಡದ ಎದುರು ಗೆಲುವು ಸಾಧಿಸಿತು.

ಇನ್ನೊಂದು ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು 3–0ಯಿಂದ ರೆಬೆಲ್ಸ್‌ ಎಫ್‌ಸಿ ತಂಡವನ್ನು ನಿರಾಯಾಸವಾಗಿ ಮಣಿಸಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.