ADVERTISEMENT

ಫುಟ್‌ಬಾಲ್‌ ಲೀಗ್‌: ಬೆಂಗಳೂರು ತಂಡ ಜಯಭೇರಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 0:23 IST
Last Updated 16 ಮಾರ್ಚ್ 2024, 0:23 IST
 ಫುಟ್‌ಬಾಲ್‌
ಫುಟ್‌ಬಾಲ್‌   

ಬೆಂಗಳೂರು: ಹಾಕ್ಹೋಲೆನ್ ಕಿಪ್ಜೆನ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಬೆಂಗಳೂರು ಸಿಟಿ ಎಫ್‌.ಸಿ ತಂಡವು ಬಿಡಿಎಫ್‌ಎ ‘ಎ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ 1–0ಯಿಂದ ರೂಟ್ಸ್‌ ಎಫ್‌ಎಸ್‌ ತಂಡವನ್ನು ಮಣಿಸಿತು.

ಗುರುವಾರ ನಡೆದ ಇತರ ಪಂದ್ಯದಲ್ಲಿ ಆರ್‌ಡಬ್ಲ್ಯುಎಫ್‌ ಎಫ್‌ಸಿ ತಂಡವು 4–2ರಿಂದ ಶ್ರೀ ಗಜಾನನ ಎಫ್‌ಸಿ ತಂಡದ ವಿರುದ್ಧ; ಎಜಿಒಆರ್‌ಸಿ ಎಫ್‌ಸಿ ತಂಡವು 5–0ಯಿಂದ ಬೆಂಗಳೂರು ಗನ್ನರ್ಸ್‌ ಎಫ್‌ಸಿ ವಿರುದ್ಧ ಜಯ ಸಾಧಿಸಿತು.

ಬಿ ಡಿವಿಷನ್‌: ಶುಕ್ರವಾರ ನಡೆದ ಬಿಡಿಎಫ್‌ಎ ಬಿ ಡಿವಿಷನ್‌ನ ಪಂದ್ಯದಲ್ಲಿ ಅಲ್‌ ಫತೇಹ್ ಎಫ್‌ಸಿ ತಂಡವು 2–1ರಿಂದ ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ ಎಫ್‌ಸಿ ತಂಡವನ್ನು ಸೋಲಿಸಿತು.

ADVERTISEMENT

ಇತರ ಪಂದ್ಯದಲ್ಲಿ ತಿಲಕ್‌ ಮೆಮೋರಿಯಲ್‌ ಎಫ್‌ಸಿ ತಂಡವು 3–0ಯಿಂದ ಮೊಹಮ್ಮದ್‌ ಸ್ಪೋರ್ಟಿಂಗ್‌ ಎಫ್‌ಸಿ ತಂಡವನ್ನು ಮಣಿಸಿತು. ಸ್ನೈಪರ್ಸ್ ಎಫ್‌ಸಿ ತಂಡವು 1–0ಯಿಂದ ಸ್ಟ್ರೈಡ್ ಎಫ್‌ಸಿ ತಂಡದ ವಿರುದ್ಧ ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.