ADVERTISEMENT

ಫುಟ್‌ಬಾಲ್‌: ಬಿಎಫ್‌ಸಿಗೆ ಭರ್ಜರಿ ಗೆಲುವು

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 14:39 IST
Last Updated 15 ಜನವರಿ 2021, 14:39 IST
ಬಿಎಫ್‌ಸಿಯ ಲಾಲ್‌ಥಾಂಗ್ಲಿಯಾನ (ಎಡ) ಅವರಿಂದ ಚೆಂಡು ಕಸಿದುಕೊಳ್ಳಲು ಯಂಗ್ ಚಾಲೆಂಜರ್ಸ್‌ನ ಭುವನ್ ಜೋಶಿ ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ
ಬಿಎಫ್‌ಸಿಯ ಲಾಲ್‌ಥಾಂಗ್ಲಿಯಾನ (ಎಡ) ಅವರಿಂದ ಚೆಂಡು ಕಸಿದುಕೊಳ್ಳಲು ಯಂಗ್ ಚಾಲೆಂಜರ್ಸ್‌ನ ಭುವನ್ ಜೋಶಿ ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಎದುರಾಳಿ ತಂಡವನ್ನು ಪ್ರತಿ ಹಂತದಲ್ಲೂ ಕಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಶುಕ್ರವಾರದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಯಂಗ್ ಚಾಲೆಂಜರ್ಸ್‌ ಎಫ್‌ಸಿಯನ್ನು ಬಿಎಫ್‌ಸಿ 3–0ಯಿಂದ ಮಣಿಸಿತು.

ಲಾಲ್‌ತಾಂಗ್ಲಿಯಾನ 13ನೇ ನಿಮಿಷದಲ್ಲಿ ಗೋಲು ಗಳಿಸಿ ಬೆಂಗಳೂರು ತಂಡದ ಖಾತೆ ತೆರೆದರು. 62ನೇ ನಿಮಿಷದಲ್ಲಿ ಶಿವಶಕ್ತಿ ಚೆಂಡನ್ನು ಗುರಿ ಮುಟ್ಟಿಸಿದರೆ, ಚಫ್‌ಮಯುಮ್ 84ನೇ ನಿಮಿಷದಲ್ಲಿ ಗುರಿ ಕಂಡರು.

ಎಫ್‌ಸಿ ಡೆಕ್ಕನ್ ಮತ್ತು ಕಿಕ್‌ಸ್ಟಾರ್ಟ್‌ ಎಫ್‌ಸಿ ನಡುವಿನ ಪಂದ್ಯ 1–1ರಲ್ಲಿ ಸಮ ಆಯಿತು. ಡೆಕ್ಕನ್ ಪರ 10ನೇ ನಿಮಿಷದಲ್ಲಿ ಸುಜೇಶ್ ಗೋಲು ಗಳಿಸಿದರು. ಕಿಕ್‌ಸ್ಟಾರ್ಟ್‌ಗೆ ಸುಧೀರ್ ಕೋಟಿಕೇಳ 54ನೇ ನಿಮಿಷದಲ್ಲಿ ಗೋಲು ತಂದುಕೊಟ್ಟರು. ಮುಂದಿನ ಎರಡು ದಿನ ಪಂದ್ಯಗಳು ಇರುವುದಿಲ್ಲ. 18ರಂದು ನಡೆಯಲಿರುವ ಹಣಾಹಣಿಗಳಲ್ಲಿ ಇನ್‌ಕಂ ಟ್ಯಾಕ್ಸ್ ಎಫ್‌ಸಿ ಮತ್ತು ಎಎಸ್‌ಸಿ–ಸೆಂಟರ್ ಎಫ್‌ಸಿ, ಸ್ಟೂಡೆಂಟ್ ಯೂನಿಯನ್ ಎಫ್‌ಸಿ ಮತ್ತು ಎಫ್‌ಸಿ ಬೆಂಗಳೂರು ಯುನೈಟೆಡ್ ತಂಡಗಳು ಸೆಣಸಲಿವೆ. ಮೊದಲ ಪಂದ್ಯ ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು 3.30ಕ್ಕೆ ಮತ್ತೊಂದು ಪಂದ್ಯ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.