ADVERTISEMENT

ಐಎಸ್ಎಲ್‌: ಹೈದರಾಬಾದ್‌ಗೆ ಮಣಿದ ಚೆನ್ನೈಯಿನ್

ಪಿಟಿಐ
Published 4 ಜನವರಿ 2021, 16:33 IST
Last Updated 4 ಜನವರಿ 2021, 16:33 IST
ಎರಡು ಗೋಲು ಗಳಿಸಿದ ಹಾಲಿಚರಣ್ ನರ್ಜರೆ ಸಂಭ್ರಮ –ಐಎಸ್‌ಎಲ್ ಮೀಡಿಯಾ ಚಿತ್ರ
ಎರಡು ಗೋಲು ಗಳಿಸಿದ ಹಾಲಿಚರಣ್ ನರ್ಜರೆ ಸಂಭ್ರಮ –ಐಎಸ್‌ಎಲ್ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್: ಜೊಯೆಲ್ ಚಿಯಾನಿಸ್, ಹಾಲಿಚರಣ್ ನರ್ಜರೆ ಮತ್ತು ಜಾವೊ ಗಳಿಸಿದ ಗೋಲುಗಳ ನೆರವಿನಿಂದ ಹೈದರಾಬಾದ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ವಿರುದ್ಧ ಭರ್ಜರಿ ಜಯ ಗಳಿಸಿತು. ಜಿಎಂಸಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ 4–1ರಲ್ಲಿ ಜಯಭೇರಿ ಮೊಳಗಿಸಿತು. ಚೆನ್ನೈಯಿನ್ ಪರ ಏಕೈಕ ಗೋಲು ಅನಿರುದ್ಧ ಥಾಪ ಗಳಿಸಿದರು.

ಮೊದಲಾರ್ಧದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಆಗಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಒಟ್ಟು ಐದು ಗೋಲುಗಳು ಹರಿದು ಬಂದವು.ಜೊಯೆಲ್‌ ಚಿಯಾನೀಸ್‌ 50ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿ ಹೈದರಾಬಾದ್‌ ಖಾತೆ ತೆರೆದರು. ಮಿಡ್‌ಫೀಲ್ಡರ್‌ ಹಾಲಿಚರಣ್ 53 ಮತ್ತು 79ನೇ ನಿಮಿಷಗಳಲ್ಲಿ ಅಬ್ಬರಿಸಿದರು. ಮಿಡ್‌ಫೀಲ್ಡರ್‌ ಜಾವೋ ವಿಕ್ಟರ್‌ 74ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಚೆನ್ನೈಯಿನ್‌ ತಂಡದ ಗೋಲು 67ನೇ ನಿಮಿಷದಲ್ಲಿ ಮೂಡಿ ಬಂತು.

ಈ ಗೆಲುವಿನೊಂದಿಗೆ ಹೈದರಾಬಾದ್ ಎಫ್‌ಸಿ ತಲಾ ಮೂರು ಜಯ, ಮೂರು ಡ್ರಾ ಮತ್ತು ಮೂರು ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿತು. ಚೆನ್ನೈಯಿನ್ ಎಫ್‌ಸಿ ಒಂಬತ್ತು ಪಂದ್ಯಗಳಲ್ಲಿ 10 ಪಾಯಿಂಟ್‌ಗಳೊಂದಿಗೆ ಎಂಟನೇ ಸ್ಥಾನಕ್ಕೆ ಕುಸಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.