ADVERTISEMENT

ಫುಟ್‌ಬಾಲ್‌ ಆಟಗಾರನಿಗೆ ತಗುಲಿದ ಕೋವಿಡ್‌ ಸೋಂಕು

ಏಜೆನ್ಸೀಸ್
Published 6 ಮಾರ್ಚ್ 2020, 16:39 IST
Last Updated 6 ಮಾರ್ಚ್ 2020, 16:39 IST
ಥಾಮಸ್‌ ಕಹ್ಲೆನ್‌ಬರ್ಗ್‌
ಥಾಮಸ್‌ ಕಹ್ಲೆನ್‌ಬರ್ಗ್‌   

ಕೋಪನ್‌ಹೇಗನ್‌: ಡೆನ್ಮಾರ್ಕ್‌ನ ಹಿರಿಯ ಫುಟ್‌ಬಾಲ್‌ ಆಟಗಾರ ಥಾಮಸ್‌ ಕಹ್ಲೆನ್‌ಬರ್ಗ್‌ ಅವರಿಗೆ ಕೋವಿಡ್‌–19 ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

‘36 ವರ್ಷ ವಯಸ್ಸಿನ ಥಾಮಸ್‌, ಇತ್ತೀಚೆಗೆ ಆ್ಯಮ್‌ಸ್ಟರ್‌ಡಾಂ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರಿಗೆ ಸೋಂಕು ತಗುಲಿದೆ. ಅವರನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬ ಆಟಗಾರ ಮತ್ತು ಸಹಾಯಕ ಕೋಚ್‌ ಸೇರಿದಂತೆ ಕ್ಲಬ್‌ನ ಇತರ 13 ಮಂದಿಯ ಮೇಲೂ ನಿಗಾ ಇಡಲಾಗಿದೆ’ ಎಂದು ಕೋಪನ್‌ಹೇಗನ್‌ನ ಬ್ರೊಂಡ್‌ಬೀ ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಿದೆ.

ಮಿಡ್‌ಫೀಲ್ಡ್‌ ವಿಭಾಗದ ಆಟಗಾರ ಥಾಮಸ್‌, 2003ರಿಂದ 2014ರ ಅವಧಿಯಲ್ಲಿ ಡೆನ್ಮಾರ್ಕ್‌ ಪರ 47 ಪಂದ್ಯಗಳನ್ನು ಆಡಿ, ಐದು ಗೋಲುಗಳನ್ನು ದಾಖಲಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.