ADVERTISEMENT

2026ರ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ಗೆ ಅರ್ಹತೆ ಪಡೆದ ಕ್ಯುರಸಾವೊ!

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 0:26 IST
Last Updated 20 ನವೆಂಬರ್ 2025, 0:26 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಕಿಂಗ್‌ಸ್ಟನ್ (ಜಮೈಕಾ): ಜನಸಂಖ್ಯೆ ಆಧಾರವಾಗಿಟ್ಟುಕೊಂಡು ನೋಡಿದರೆ, ಕೆರೀಬಿಯನ್ ದ್ವೀಪ ಸಮೂಹದ ಕ್ಯುರಸಾವೊ 2026ರ ಫಿಫಾ ವಿಶ್ವಕಪ್ ಫುಟ್‌ಬಾಲ್‌ಗೆ ಅರ್ಹತೆ ಪಡೆದ ಅತಿ ಚಿಕ್ಕ ದೇಶವೆನಿಸಿದೆ.

ಡಚ್ಚರ ಅಧೀನದಲ್ಲಿದ್ದ, ಈಗ ಸ್ವಾಯತ್ತ ರಾಷ್ಟ್ರವಾಗಿರುವ ಕ್ಯುರಸಾವೊದ ಜನಸಂಖ್ಯೆ ಕೇವಲ 1,56,000. ಈ ಹಿಂದೆ ಈ ದಾಖಲೆ ಐಸ್‌ಲ್ಯಾಂಡ್‌ (ಜನಸಂಖ್ಯೆ 3,50,000) ಹೆಸರಿನಲ್ಲಿತ್ತು. ಐಸ್‌ಲ್ಯಾಂಡ್‌ 2018ರ ರಷ್ಯಾ ವಿಶ್ವಕಪ್‌ನಲ್ಲಿ ಆಡಿತ್ತು

ADVERTISEMENT

ನೆದರ್ಲೆಂಡ್ಸ್‌ನಲ್ಲಿ ಹುಟ್ಟಿಬೆಳೆದ ಆಟಗಾರರನ್ನೇ ನೆಚ್ಚಿಕೊಂಡು ಈ ದ್ವೀಪದ ತಂಡ ಕಟ್ಟಲಾಗಿದೆ. ಕ್ಯುರಸಾವೊ ದೇಶವು, ಜಮೈಕಾ, ಟ್ರಿನಿಡಾಡ್‌ ಅಂಡ್ ಟೊಬ್ಯಾಗೊ ಮತ್ತು ಬರ್ಮುಡಾ ದೇಶಗಳಿದ್ದ ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿತು. ಕೊನೆಯ ಲೀಗ್ ಪಂದ್ಯದಲ್ಲಿ ಜಮೈಕಾ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡಿತು.

2016ರಲ್ಲಿ ನೆದರ್ಲೆಂಡ್ಸ್ ಪರ ವಿಶ್ವಕಪ್ ಅರ್ಹತಾ ಸುತ್ತು ಆಡಿದ್ದ ಡಿಫೆಂಡರ್ ಜೋಶು ಬ್ರೆನೆಟ್ ಸಹ ಕ್ಯುರಸಾವೊ ತಂಡದಲ್ಲಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್‌ಗೆ ಆಡಿದ ತಹಿತ್ ಚೊಂಗ್ ಅವರು ಕ್ಯುರಸಾವೊದಲ್ಲಿ ಜನಿಸಿದ ಆಟಗಾರ.

ಇದೇ ವಲಯದಿಂದ ಪನಾಮಾ ಮತ್ತು ಹೈಟಿ ಸಹ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.