ಫುಟ್‌ಬಾಲ್
ಕೋಲ್ಕತ್ತ : ಮೊಹಮಡನ್ ಸ್ಪೋರ್ಟಿಂಗ್ ತಂಡವು. 134ನೇ ಇಂಡಿಯನ್ ಆಯಿಲ್ ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿ ‘ಬಿ’ ಗುಂಪಿನ ಪಂದ್ಯದಲ್ಲಿ ಗುರುವಾರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಫುಟ್‌ಬಾಲ್ ಕ್ಲಬ್ ತಂಡವನ್ನು 3–0ರಿಂದ ಸೋಲಿಸಿತು.
ಕಿಶೋರ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸಜಲ್ ಬಾಗ್ (5ನೇ ನಿಮಿಷ), ಮಕ್ಸಿಯೊನ್ (21 ಮತ್ತು 30ನೇ ನಿಮಿಷ) ಅವರು ಕೋಲ್ಕತ್ತದ ಕ್ಲಬ್ ಪರ ಗೋಲುಗಳನ್ನು ಗಳಿಸಿದರು.
16 ಬಾರಿಯ ಚಾಂಪಿಯನ್ ಈಸ್ಟ್ ಬೆಂಗಾಲ್ ಎಫ್‌ಸಿ ತಂಡವು ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ 1–0ಯಿಂದ ನಾಮಧಾರಿ ಎಫ್‌ಸಿ ತಂಡವನ್ನು ಮಣಿಸಿ, ಅಜೇಯ ಓಟ ಮುಂದುವರಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.